ಕ್ರೀಡೆ

ಐಸಿಸಿ ಏಕದಿನ ರ್‍ಯಾಂಕಿಂಗ್‌ ಪಟ್ಟಿಯಿಂದ ರೋಹಿತ್​​, ಕೊಹ್ಲಿ ನಾಪತ್ತೆ ! | ODI rankings

ODI rankings: ಭಾರತದ ಏಕದಿನ ಕ್ರಿಕೆಟಿನ ತಾರಾ ಜೋಡಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬುಧವಾರ, ಆಗಸ್ಟ್ 20 ರಂದು ಐಸಿಸಿ ಶ್ರೇಯಾಂಕದಿಂದ ಕೈ ಬಿಟ್ಟಿರುವುದು ನಿವೃತ್ತಿಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.

ರೋಹಿತ್ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದ ಒಂದು ವಾರದ ನಂತರ ಈ ಬೆಳವಣಿಗೆ ಸಂಭವಿಸಿದ್ದು, ಮತ್ತೊಂದೆಡೆ, ಕೊಹ್ಲಿ 736 ಅಂಕಗಳೊಂದಿಗೆ 4 ನೇ ಸ್ಥಾನದಲ್ಲಿದ್ದಾರೆ. ಶುಭ್ಮನ್ ಗಿಲ್ 756 ಅಂಕಗಳೊಂದಿಗೆ ಏಕದಿನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

38 ವರ್ಷದ ರೋಹಿತ್, 36 ವರ್ಷದ ಕೊಹ್ಲಿ ಈಗ ಏಕದಿನ ಕ್ರಿಕೆಟ್​​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ 2024 ರಲ್ಲಿ T20I ಮತ್ತು ಈ ವರ್ಷದ ಆರಂಭದಲ್ಲಿ ಟೆಸ್ಟ್‌ಗಳಿಂದ ನಿವೃತ್ತಿ ಘೋಷಿಸಿದ್ದಾರೆ.

ಇದು ಉದ್ದೇಶಪೂರ್ವಕವಾಗಿ ನಡೆದಿದೆಯೋ ಇಲ್ಲವೇ ತಾಂತ್ರಿಕ ದೋಷಗಳಿವೆಯೋ ಎನ್ನುವ ಗೊಂದಲಕ್ಕೆ ಐಸಿಸಿ ತೆರೆ ಎಳೆಯಬೇಕಿದೆ.

ಐಸಿಸಿ ಏಕದಿನ ಶ್ರೇಯಾಂಕ

ಆಗಸ್ಟ್ 20 ರಂದು ಬಿಡುಗಡೆಯಾದ ಶ್ರೇಯಾಂಕದ ಪ್ರಕಾರ, ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ 10 ರೊಳಗೆ ಸ್ಥಾನ ಪಡೆದ ಇಬ್ಬರು ಭಾರತೀಯರು.(ಏಜೆನ್ಸೀಸ್)