ಕ್ರೀಡೆ

ನನಗೆ ವಿಷ ಬೆರೆಸಿದ ಆಹಾರ ನೀಡಲಾಗಿತ್ತು: ಟೆನಿಸ್​ ತಾರೆ ನೊವಾಕ್​ ಜೊಕೊವಿಕ್​ ಗಂಭೀರ ಆರೋಪ | Novak Djokovic

ಮೆಲ್ಬರ್ನ್​: 2022ರ ಕೋವಿಡ್​ ಸಮಯದಲ್ಲಿ ವಿಸಾ ವಿಚಾರವಾಗಿ ನನ್ನನ್ನು ಬಂಧಿಸಿ ಹೋಟೆಲ್​ನಲ್ಲಿಟ್ಟಿಗಾ ನನಗೆ ವಿಷ ಬೆರೆಸಿದ ಆಹಾರ ನೀಡಲಾಗಿತ್ತು ಎಂದು ಟೆನಿಸ್​ ಸ್ಟಾರ್​ ಆಟಗಾರ ನೊವಾಕ್​ ಜೊಕೊವಿಕ್(Novak Djokovic)​ ಗಂಭೀರ ಆರೋಪವನ್ನು ಮಾಡಿದ್ದಾರೆ.

ಈ ಕುರಿತು ಜಿಕ್ಯೂ(GQ) ಮ್ಯಾಗ್​ಜಿನ್​ಗೆ ನೀಡಿದ ಸಂದರ್ಶದಲ್ಲಿ  ಮಾತನಾಡಿದ್ದಾರೆ. ''ನಾನು ಆಸ್ಟ್ರೇಲಿಯಾದಿಂದ ಮನೆಗೆ ಹಿಂದಿರುಗಿದಾಗ ನನಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು. ನಾನು ಮೆಲ್ಬೋರ್ನ್‌ನ ಹೋಟೆಲ್‌ನಲ್ಲಿ ಊಟ ಮಾಡಿದ್ದೆ. ಆಗ ನನಗೆ ವಿಷ ಪ್ರಯೋಗ ನಡೆದಂತೆ ಭಾವವಾಗಿತ್ತು. ಸರ್ಬಿಯಾಕ್ಕೆ ಹೋದ ನಂತರ ನನಗೆ ಆರೋಗ್ಯ ತೊಂದರೆಯಾಯಿತು.

ಆದರೆ ನಾನು ಇದರ ಬಗ್ಗೆ ಯಾರಿಗೂ ಮತ್ತು ಎಲ್ಲೂ ಹೇಳಿಕೊಂಡಿಲ್ಲ. ನಾನು ತಿಂದ ಆಹಾರದಲ್ಲಿ ಬಹಳಷ್ಟು ಭಾರ ಲೋಹಗಳು ಇರುವುದು ನನಗೆ ಕಂಡುಬಂದಿತು. ಸೀಸದ ಜೊತೆಗೆ ಪಾದರಸದ ಮಟ್ಟವೂ ಹೆಚ್ಚಾಗಿದೆ. ಅದೇ ಆಹಾರ ವಿಷವಾಗಿ ಬದಲಾಗಬಹುದಿತ್ತು'' ಎಂದು ನೊವಾಕ್ ಜೊಕೊವಿಕ್ ಹೇಳಿದ್ದಾರೆ.

ಬಂಧಿಸಲು ಕಾರಣ?

2022 ರ ಆಸ್ಟ್ರೇಲಿಯನ್ ಓಪನ್ ಟೂರ್ನಮೆಂಟ್​ಗೆ ಭಾಗವಹಿಸುವವರು ಕೋವಿಡ್ ಲಸಿಕೆಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಜೊಕೊವಿಕ್ ಇದಕ್ಕೆ ಒಪ್ಪಲಿಲ್ಲ. ಅವರು ಲಸಿಕೆ ತೆಗೆದುಕೊಳ್ಳದೆಯೇ ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾದ ಮೆಲ್ಬೋರ್ನ್‌ಗೆ ಪ್ರವೇಶಿಸಿದ್ದರು. ಹೀಗಾಗಿ ಅವರನ್ನು ಬಂಧಿಸಲಾಗಿತ್ತು.(ಏಜೆನ್ಸಿಸ್​)