Virat Kohli: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯ ಸೋತ ಟೀಮ್ ಇಂಡಿಯಾಗೆ ಸದ್ಯ ಯಾವುದೂ ಸರಿಯಿಲ್ಲ ಎನ್ನುವಂತಾಗಿದೆ. ಭಾರತ ತಂಡದ ಪ್ರದರ್ಶನ ಸೇರಿದಂತೆ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜ ಬ್ಯಾಟರ್ಗಳು ನೀಡಿದ ಅತ್ಯಂತ ಕಳಪೆ ಪ್ರದರ್ಶನ ಇದೀಗ ವ್ಯಾಪಕ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದೆ.
ಇದನ್ನೂ ಓದಿ: ಈ ಹಾಡುಗಳು ಹಿಟ್ ಆದ್ರೂ ಸಿನಿಮಾ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ! ಸಂಭಾವನೆ ಹಿಂತಿರುಗಿಸಿದ Sai Pallavi
ಆಸ್ಟ್ರೇಲಿಯಾ ವಿರುದ್ಧ ನಡೆದಿರುವ ಒಟ್ಟು ನಾಲ್ಕು ಟೆಸ್ಟ್ನಲ್ಲಿ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ್ದು ಬಿಟ್ಟರೆ, ಉಳಿದ ಮ್ಯಾಚ್ಗಳಲ್ಲಿ ವಿರಾಟ್ ಪ್ರದರ್ಶನ ತೀರ ಕಳಪೆಯಾಗಿದೆ. ಈ ವಿಷಯ ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಹಿರಿಯ ಕ್ರಿಕೆಟಿಗರನ್ನು ಬೇಸರಕ್ಕೆ ದೂಡಿದ್ದು, ಕೊಹ್ಲಿ ಟೆಸ್ಟ್ ನಿವೃತ್ತಿ ಬಗ್ಗೆ ಚರ್ಚಿಸುವಂತೆ ಮಾಡಿದೆ. ನಿವೃತ್ತಿ ವಿಷಯ ಒಂದೆಡೆಯಾದರೆ, ವಿರಾಟ್ ಅವರ ಆಫ್ ಸ್ಟಂಪ್ ವಿಕೆಟ್ ಸಮಸ್ಯೆ ಬಗ್ಗೆಗಿನ ಚರ್ಚೆ ಮತ್ತೊಂದೆಡೆ. ಕೊಹ್ಲಿಯ ಆಫ್ ಸ್ಟಂಪ್ ಸಮಸ್ಯೆ ಕುರಿತು ಕ್ರಿಕೆಟ್ ತಜ್ಞರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ, ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಮಾರ್ಕ್ ನಿಕೋಲಸ್ ಮಾತ್ರ ಬೇಸರ ಹೊರಹಾಕಿದ್ದಾರೆ.
"ನಾನು ವಿರಾಟ್ ಕೊಹ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ನನ್ನ ಪ್ರಕಾರ, ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ. ಆದರೆ ಅವರ ಆಫ್ ಸ್ಟಂಪ್ ಸಮಸ್ಯೆಯನ್ನು ಅವರಿಂದಲೇ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಬೇಸರ. ಅವರಂತಹ ಒಬ್ಬ ಸ್ಟಾರ್ ಬ್ಯಾಟರ್ಗೆ ತಮ್ಮ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಲು ಅಸಾಧ್ಯವಾಗಿದೆ ಎಂದರೆ, ಇಲ್ಲಿ ನೀವು ಕೊಹ್ಲಿಯ ಬ್ಯಾಟಿಂಗ್ ಕೋಚ್ ಅವರ ಪಾತ್ರವನ್ನು ಪ್ರಶ್ನಿಸಬೇಕಾಗುತ್ತದೆ. ನನ್ನ ಪ್ರಕಾರ, ಬ್ಯಾಟಿಂಗ್ ಕೋಚ್ ಇದಕ್ಕೆ ಉತ್ತರಿಸಬೇಕು. ಆದರೆ ಆ ಬೆಳವಣಿಗೆ ನನಗೆ ಕಾಣಿಸಿಲ್ಲ" ಎಂದು ನಿಕೋಲಸ್ ಹೇಳಿದ್ದಾರೆ,(ಏಜೆನ್ಸೀಸ್).