ಕ್ರೀಡೆ

ಸೆಮಿಫೈನಲ್​ಗೇರಿದ ಹುಬ್ಬಳ್ಳಿ ಟೈಗರ್ಸ್​; ಕ್ಷೀಣಿಸಿದ ಶಿವಮೊಗ್ಗ ಲಯನ್ಸ್​ ಆಸೆ

ಬೆಂಗಳೂರು: ಸಂಟಿತ ಬೌಲಿಂಗ್​ ದಾಳಿ ಮತ್ತು ಶ್ರೀಜಿತ್​ (50) ಅರ್ಧಶತಕದಾಸರೆಯಿಂದ ಹುಬ್ಬಳ್ಳಿ ಟೈಗರ್ಸ್​ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಯಲ್ಲಿ ಶುಕ್ರವಾರದ 2ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್​ ವಿರುದ್ಧ 3 ವಿಕೆಟ್​ಗಳಿಂದ ಗೆಲುವು ದಾಖಲಿಸಿತು. ಟೂರ್ನಿಯಲ್ಲಿ ಕಂಡ 7ನೇ ಜಯದೊಂದಿಗೆ ಮನೀಷ್​ ಪಾಂಡೆ ಬಳಗ ಸೆಮೀಸ್​ ಪ್ರವೇಶ ಖಚಿತಪಡಿಸಿಕೊಂಡರೆ, 5ನೇ ಸೋಲಿನಿಂದ ಶಿವಮೊಗ್ಗದ ಆಸೆ ಣಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಶಿವಮೊಗ್ಗ ತಂಡ ಭರ್ತಿ 20 ಓವರ್​ಗಳಲ್ಲಿ 130 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಒಂದು ಹಂತದಲ್ಲಿ 71 ರನ್​ಗೆ 5 ವಿಕೆಟ್​ ಕಳೆದುಕೊಂಡು ತತ್ತರಿಸಿದ ಹುಬ್ಬಳ್ಳಿ, ಅಂತಿಮವಾಗಿ 18.4 ಓವರ್​ಗಳಲ್ಲಿ 7 ವಿಕೆಟ್​ಗೆ 131 ರನ್​ ಪೇರಿಸಿ ಜಯಿಸಿತು.

ಶಿವಮೊಗ್ಗ ಲಯನ್ಸ್​: 20 ಓವರ್​ಗಳಲ್ಲಿ 130 (ಶ್ರೇಯಸ್​ 31, ಕ್ರಾಂತಿ 34, ಅಭಿನವ್​ 1, ಮನ್ವಂತ್​ 20ಕ್ಕೆ 2, ಕೆಸಿ ಕಾರ್ಯಪ್ಪ 17ಕ್ಕೆ 2, ಸಂತೋಕ್​ 26ಕ್ಕೆ 2). ಹುಬ್ಬಳ್ಳಿ ಟೈಗರ್ಸ್​: 18.4 ಓವರ್​ಗಳಲ್ಲಿ 7 ವಿಕೆಟ್​ಗೆ 131 (ತಾಹ 12, ಶ್ರೀಜಿತ್​ 50, ಮನೀಷ್​ 3, ಮನ್ವಂತ್​ 27, ಶ್ರೇಯಸ್​ ಗೋಪಾಲ್​ 30ಕ್ಕೆ 4, ಕೌಶಿಕ್​ 15ಕ್ಕೆ 1). ಪಂದ್ಯಶ್ರೇಷ್ಠ: ಶ್ರೀಜಿತ್​.