ಬೆಂಗಳೂರು: ಈ ಸಲ ಕಪ್ ನಮ್ದೇ ಎಂದು ಅಭಿಮಾನಿಗಳು ನಡೆದ 16 ವರ್ಷಗಳಿಂದ ಪ್ರೀತಿ ತೋರುತ್ತಿದ್ದರೂ ಕಪ್ ಗೆಲ್ಲದೆ ನಿರಾಸೆ ಮೂಡಿಸುತ್ತಿದ್ದ ಆರ್ಸಿಬಿ ತಂಡ ಇತ್ತೀಚೆಗೆ ಡಬ್ಲ್ಯುಪಿಎಲ್ನಲ್ಲಿ ಮಹಿಳಾ ತಂಡ ಕಪ್ ಗೆದ್ದು ಬೀಗಿರುವ ಸಾಧನೆಯಿಂದ ಸ್ಫೂರ್ತಿ ಪಡೆಯಬೇಕಾಗಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ತಪ್ಪಿಸಿಕೊಂಡಿದ್ದರೂ, ವಿರಾಟ್ ಕೊಹ್ಲಿ ಐಪಿಎಲ್ಗೆ ಮರಳಿರುವುದು ಆರ್ಸಿಬಿಗೆ ಪ್ರಮುಖ ಸಮಾಧಾನಕರ ವಿಷಯ. ಇದರಿಂದ ಆರ್ಸಿಬಿ ತಂಡ ಈ ಸಲವೂ 'ಕೆಜಿಎಫ್' (ಕೊಹ್ಲಿ, ಗ್ಲೆನ್, ಫಾಫ್) ಬಲ ಉಳಿಸಿಕೊಂಡಂತಾಗಿದೆ.
ಆಸೀಸ್ ಯುವ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ರನ್ನು ಬರೋಬ್ಬರಿ 17 ಕೋಟಿ ರೂ.ಗೆ ಮುಂಬೈನಿಂದ ವರ್ಗಾವಣೆ ಮಾಡಿಕೊಂಡಿರುವುದು ಆರ್ಸಿಬಿಗೆ ಎಷ್ಟರ ಮಟ್ಟಿಗೆ ಲಾಭದಾಯಕ ಎಂಬುದನ್ನು ನೋಡಬೇಕಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಸಿರಾಜ್-ವೈಶಾಕ್ ಹೊರತಾಗಿ ಬಹುತೇಕ ಹೊಸ ಸದಸ್ಯರಿದ್ದಾರೆ. ಫಾಫ್ ಡು ಪ್ಲೆಸಿಸ್ ಪಡೆಗೆ ಈ ಸಲವೂ ಬ್ಯಾಟಿಂಗ್ ಪ್ರಮುಖ ಬಲವಾಗಿದೆ. ಆದರೆ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಸ್ಟಾರ್ಸ್ ಇಲ್ಲದಿರುವುದು ಹಿನ್ನಡೆಯಾಗಬಹುದು.
ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್, ಕ್ಯಾಮರಾನ್ ಗ್ರೀನ್, ರಜತ್ ಪಾಟೀದಾರ್, ಅನುಜ್ ರಾವತ್, ಸೌರವ್ ಚೌವ್ಹಾಣ್, ವಿಲ್ ಜಾಕ್ಸ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಮೊಹಮದ್ ಸಿರಾಜ್, ಆಕಾಶ್ ದೀಪ್, ಟಾಮ್ ಕರನ್, ಲಾಕಿ ಫಗ್ಯುರ್ಸನ್, ಅಲ್ಜಾರಿ ಜೋಸೆಫ್, ರಾಜನ್ ಕುಮಾರ್, ವೈಶಾಕ್ ವಿಜಯ್ ಕುಮಾರ್, ಹಿಮಾಂಶು ಶರ್ಮ, ಕರ್ಣ್ ಶರ್ಮ, ಸ್ವಪ್ನಿಲ್ ಸಿಂಗ್, ಯಶ್ ದಯಾಳ್, ರೀಸ್ ಟಾಪ್ಲೆ, ಮಯಾಂಕ್ ದಾಗರ್.