ಕ್ರೀಡೆ

ನಾಯಕಿ ಹರ್ಮನ್​ಪ್ರೀತ್ T-Shirt ವೈರಲ್​! ಫೋಟೋ ಮೂಲಕ ರವಾನಿಸಿದ ಸಂದೇಶ ಆದ್ರೂ ಏನು?

ನವದೆಹಲಿ: ನಿನ್ನೆ (ನ.02) ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳಾ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ 52 ರನ್​ಗಳಿಂದ ಗೆದ್ದ ಹರ್ಮನ್​ಪ್ರೀತ್ ಕೌರ್​ ಪಡೆ, ಚೊಚ್ಚಲ ವಿಶ್ವಕಪ್​ ಟ್ರೋಫಿಗೆ ಮುತ್ತಿಡುವ ಮೂಲಕ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು.

ಜಗತ್ತಿನಾದ್ಯಂತ ಜಯದ ಶುಭಾಷಗಳು ಹರಿದು ಬರಿತ್ತಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಇದೀಗ ನಾಯಕಿ ಹರ್ಮನ್‌ಪ್ರೀತ್ ಕೌರ್ ಟ್ರೋಫಿಯೊಂದಿಗೆ ತಮ್ಮ ಫೋಟೋ ಮತ್ತು ಸಂದೇಶವನ್ನು ಹಂಚಿಕೊಂಡಿದ್ದಾರೆ. ಹರ್ಮನ್‌ಪ್ರೀತ್ ತಮ್ಮ ಪಕ್ಕದಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಎಲ್ಲರ ಗಮನ ಸೆಳೆದದ್ದು "ಕ್ರಿಕೆಟ್ ಎಲ್ಲರ ಆಟ" ಎಂದು ಬರೆದಿರುವ ಅವರ(T-Shirt) ಟಿ-ಶರ್ಟ್. ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

''ಟಿ-ಶರ್ಟ್ನಲ್ಲಿ ವಿಶೇಷವಾಗಿ ಕ್ರಿಕೆಟ್​(ಜೆಂಟಲ್​ಮೆನ್ಸ್​) ಎಲ್ಲರ ಆಟ'' ಎಂದು ಬರೆಯಲಾಗಿದೆ. ಈ ಪದದಲ್ಲಿರುವ ಜೆಂಟಲ್​​ಮೆನ್​ ಎಂಬ ಪದವನ್ನು ಹಳಸಿ ಹಾಕಲಾಗಿದೆ. ಇದು ಇದೀಗ ನೆಟ್ಟಿಗರ ಗಮನಸೆಳೆದಿದೆ.

ನೆಟ್ಟಿಗರ ಪ್ರತಿಕ್ರಿಯೆ

ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರ ವೈರಲ್​ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಭಾರತೀಯ ಕ್ರಿಕೆಟ್​ಗೆ ಹೊಸ ಯುಗದ ಸಂಕೇತ ಬಳಕೆದಾರರು ಶ್ಲಾಘಿಸಿದ್ದಾರೆ. ಮಹಿಳೆಯರು ಕೇವಲ ಭಾಗವಹಿಸುವವರಲ್ಲ.. ಅವರು ಇತಿಹಾಸ ಬರೆದ ಚಾಂಪಿಯನ್​ಗಳು ಎಂದು ಕೊಂಡಾಡಿದ್ದಾರೆ.

ಹರ್ಮನ್ ಭಾವುಕ ಕ್ಷಣ

ಇನ್ನು ಪಂದ್ಯದಲ್ಲಿ ಕ್ಯಾಪ್ಟನ್​ ಹರ್ಮನ್‌ಪ್ರೀತ್ ಸ್ವತಃ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೌದು ದೀಪ್ತಿ ಶರ್ಮ ಅವರ ಬೌಲಿಂಗ್‌ನಲ್ಲಿ ನಾಡಿನ್ ಡಿ ಕ್ಲರ್ಕ್ ಅವರನ್ನು ಅದ್ಭುತ ಕ್ಯಾಚ್ ಮೂಲಕ ಔಟ್ ಮಾಡುವ ಮೂಲಕ ಪಂದ್ಯ ಗೆಲುವಿನ ಆಂತ್ಯ ಹಾಡಿದರು. ಬಹುನಿರೀಕ್ಷಿತ ವಿಜಯವನ್ನು ಆಚರಿಸುವಾಗ ಹರ್ಮನ್​ ಭಾವುಕರಾದರು.(ಏಜೆನ್ಸೀಸ್​)