Rahul Dravid: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಸೋಲುಂಡಿದ್ದ ಕೋಲ್ಕತ ನೈಟ್ ರೈಡರ್ಸ್ ತಂಡ, ತನ್ನ ಎರಡನೇ ಪಂದ್ಯದಲ್ಲಿ ಗೆಲುವು ದಾಖಲಿಸಿತು. ಬುಧವಾರ (ಮಾರ್ಚ್ 26) ರಾತ್ರಿ ಗುವಾಹಟಿಯಲ್ಲಿ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎಂಟು ವಿಕೆಟ್‌ಗಳಿಂದ ಎರಡನೇ ಬಾರಿ ಸೋಲುಂಡಿತು. ಇದು ಆರ್ಆರ್ ಅಭಿಮಾನಿಗಳಿಗೆ ಅಷ್ಟು ಬೇಸರ ನೀಡದೆ ಹೋದರೂ, ಭಾರತೀಯ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ರನ್ನು ವೀಲ್ಚೇರ್ನಲ್ಲಿ ಕಂಡು ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಿತ್ಯಾನಂದನ ಕೈಲಾಸದಿಂದ 20 ಜನರು ಗಡಿಪಾರು! ಸ್ಥಳೀಯರ ಭೂಮಿ ಕಬಳಿಸಿದ್ದಕ್ಕಾಗಿ ಇದು ಸರ್ಕಾರದ ನಿರ್ಧಾರ…Nithyananda
2025ರ ಐಪಿಎಲ್ ಆವೃತ್ತಿಗೆ ರಾಜಸ್ಥಾನ ರಾಯಲ್ಸ್ ತಂಡವನ್ನು ಕೋಚ್ ಮಾಡಿದ ರಾಹುಲ್ ದ್ರಾವಿಡ್, ಒಂದು ಸಣ್ಣ ಇಂಜುರಿಯಿಂದ ಬಳಲುತ್ತಿದ್ದಾರೆ. ನಿನ್ನೆ ನಡೆದ ಪಂದ್ಯವನ್ನು ವೀಲ್ಚೇರ್ನಲ್ಲಿ ಕುಳಿತೇ ಪಂದ್ಯ ವೀಕ್ಷಿಸಿದ ದ್ರಾವಿಡ್, ಸತತ ಎರಡನೇ ಬಾರಿಗೆ ಆರ್ಆರ್ ಸೋಲುಂಡಿದ್ದನ್ನು ಕಂಡು ಮೌನಕ್ಕೆ ಜಾರಿದರು. ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಎರಡು ಸತತ ಸೋಲುಗಳಿಂದ ಆರ್ಆರ್ ಕೊನೆ ಸ್ಥಾನವನ್ನು ಅಲಂಕರಿಸಿದೆ. ಇದು ಫ್ರಾಂಚೈಸಿ ಅಭಿಮಾನಿಗಳಲ್ಲಿ ಬೇಸರ ತಂದೊಡ್ಡಿದ್ದೇ ಆದರೂ ಕ್ರಿಕೆಟ್ ದಿಗ್ಗಜನ ಪರಿಸ್ಥಿತಿ ಕಂಡು ಜಾಲತಾಣಗಳಲ್ಲಿ ಮರುಗಿದ್ದಾರೆ.
ವೀಲ್ಚೇರ್ನಲ್ಲಿ ಕುಳಿತು ಕೆಕೆಆರ್ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ರಾಹುಲ್ ದ್ರಾವಿಡ್ ಫೋಟೋ ಮತ್ತು ವಿಡಿಯೋಗಳು ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿವೆ. ಇದನ್ನು ನೋಡಿದ ಅಭಿಮಾನಿಗಳು, 'ತಮ್ಮ ನೆಚ್ಚಿನ ದಿಗ್ಗಜನನ್ನು ವೀಲ್ಚೇರ್ನಲ್ಲಿ ನೋಡುವುದು ಕಷ್ಟವಾಗುತ್ತಿದೆ. ಆದರೆ, ಅವರ ಬದ್ಧತೆ, ಸಮರ್ಪಣೆ ನಿಜಕ್ಕೂ ಅವರ ಮೇಲಿನ ಗೌರವವನ್ನು ದುಪ್ಪಟ್ಟಾಗಿಸಿದೆ' ಎಂದಿದ್ದಾರೆ,(ಏಜೆನ್ಸೀಸ್).