RCB vs CSK: ಮೇ.3ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ ( CSK ) ನಡುವಿನ ರಣರೋಚಕ ಪಂದ್ಯದಲ್ಲಿ ಕೇವಲ 2 ರನ್‌ಗಳಿಂದ ಆರ್ಸಿಬಿ ತವರಿನಲ್ಲಿ ಗೆದ್ದು ಬೀಗಿತು. ಕೊನೆ ಎಸೆತದವರೆಗೂ ಸಖತ್ ಪೈಪೋಟಿ ನೀಡಿದ ಚೈನ್ನೈ ಬ್ಯಾಟರ್ಸ್ ಅಂತಿಮವಾಗಿ ಮತ್ತೊಂದು ಸೋಲಿಗೆ ಶರಣಾಯಿತು. ಈ ಒಂದು ಪಂದ್ಯದಲ್ಲಿ ಎರಡು ತಂಡಗಳ ಆಟಗಾರರಿಂದ ಅದ್ಭುತ ಪ್ರದರ್ಶನ ಮೂಡಿಬಂದಿದ್ದು, ಓರ್ವ ಮಾತ್ರ ಆರ್ಸಿಬಿ ದಿಗ್ಗಜರನ್ನು ನೆನಪಿಸಿರುವುದು ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ನಾಲ್ಕು ವರ್ಷ ಮಕ್ಕಳನ್ನು ಮನೆಯಲ್ಲೇ ಕೂಡಿ ಹಾಕಿದ ಪಾಲಕರು: ಕಾರಣ ಕೇಳಿದ್ರೆ ಶಾಕ್ ಆಗೋದು ಖಚಿತ! House Of Horror
ಕೇವಲ 14 ಬಾಲ್ಗಳಲ್ಲಿ 53 ರನ್ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಎರಡನೇ ಕ್ರಿಕೆಟಿಗ ಎಂಬ ದಾಖಲೆಗೆ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ ರೊಮಾರಿಯೊ ಶೆಫರ್ಡ್ ಸಾಕ್ಷಿಯಾದರು. ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ ರೊಮಾರಿಯೊ, ಸ್ಫೋಟಕ ಇನ್ನಿಂಗ್ಸ್ ನೀಡುವುದರ ಜತೆಗೆ ಆಟದ ದಿಕ್ಕನೇ ಬದಲಿಸಿದರು. ಶೆಫರ್ಡ್ ಅಬ್ಬರದ ಬ್ಯಾಟಿಂಗ್ ಮತ್ತು ದಾಖಲೆಯನ್ನು ಆರ್ಸಿಬಿ ದಿಗ್ಗಜರೊಂದಿಗೆ ಹೋಲಿಸಿ ಮಾತನಾಡಿದ ಕಮೆಂಟೇಟರ್ ಅನಂತ್ ತ್ಯಾಗಿ, "ಈತ ಕೂಡ ಕ್ರೀಸ್ ಗೇಲ್, ಎಬಿಡಿ ಮತ್ತು ಕೊಹ್ಲಿಯಂತೆ" ಎಂದು ಹೇಳಿದ್ದಾರೆ.
"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ರೀತಿಯ ಘರ್ಜನೆ ಸಿಕ್ಕಿರುವುದು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಕ್ರೀಸ್ ಗೇಲ್ಗೆ ಮಾತ್ರ. ಆ ನಂತರದಲ್ಲಿ ಈಗ ರೊಮೊರಿಯೊ ಶೆಫರ್ಡ್ ಸೇರ್ಪಡೆಯಾಗಿದ್ದಾರೆ. ಆರ್ಸಿಬಿ ಅಭಿಮಾನಿಗಳಿಂದ ಇಂತಹ ಭವ್ಯ ಸ್ವಾಗತ, ಬೆಂಬಲ ಸ್ವೀಕರಿಸಿದ ಆಟಗಾರ ಇವರು" ಎಂದರು. ತ್ಯಾಗಿ ಮಾತನ್ನು ಒಪ್ಪಿದ ಸುರೇಶ್ ರೈನಾ, "ಹೌದು, ನೀವೇಳಿದ್ದು ಸರಿಯಿದೆ. ಈ ಹಿಂದೆ ಮುಂಬೈ ಇಂಡಿಯನ್ಸ್ಗೆ ಹಲವಾರು ಪಂದ್ಯಗಳನ್ನು ಗೆದ್ದು ಕೊಟ್ಟಿರುವ ಕಿರಾನ್ ಪೋಲಾರ್ಡ್. ಎಂಐ ಪರ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಈಗ ಅವರಂತೆಯೇ ಶೆಫರ್ಡ್ ಕೂಡ ಆರ್ಸಿಬಿಗೆ ಆಡ್ತಿದ್ದಾರೆ" ಎಂದರು,(ಏಜೆನ್ಸೀಸ್).