ಕ್ರೀಡೆ

ಶುಭಮನ್​ ಗಿಲ್​, ಜಸ್ಪ್ರಿತ್ ಬುಮ್ರಾ ಅಲ್ಲವೇ ಅಲ್ಲ! ಈತನೇ ಟೀಮ್ ಇಂಡಿಯಾ ಬೆನ್ನೆಲುಬು: ಸುರೇಶ್ ರೈನಾ | IND vs ENG

IND vs ENG: ಪ್ರಸಕ್ತ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಜು.23ರಿಂದ ನಡೆಯಲಿರುವ ನಾಲ್ಕನೇ ಟೆಸ್ಟ್​ನಲ್ಲಿ ಗೆಲುವಿನ ಅನಿವಾರ್ಯತೆ ಎದುರಾಗಿದ್ದು, ಗಿಲ್ ಪಡೆಯಲ್ಲಿ ಮಹತ್ವದ ಬದಲಾವಣೆಗಳು ಕೂಡ ನಡೆದಿವೆ. ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಶುಭಮನ್ ಗಿಲ್ ನಾಯಕತ್ವದಲ್ಲಿ ಸರಣಿ ಗೆಲ್ಲಲು ಎದುರುನೋಡುತ್ತಿರುವ ಭಾರತ ತಂಡದಲ್ಲಿ ಗಿಲ್​, ರಿಷಭ್ ಪಂತ್​, ಕೆ.ಎಲ್. ರಾಹುಲ್​, ಮೊಹಮ್ಮದ್​ ಸಿರಾಜ್​, ಜಸ್ಪ್ರಿತ್​ ಬುಮ್ರಾ ಸೇರಿದಂತೆ ಕೆಲವರು ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ನಾಲ್ಕನೇ ಟೆಸ್ಟ್​ನಲ್ಲಿ ಭರ್ಜರಿ ಆಲ್​ರೌಂಡ್ ಪ್ರದರ್ಶನದ ಜೊತೆಗೆ ಗೆಲುವಿಗಾಗಿ ಕಾಯುತ್ತಿರುವ ಟೀಮ್ ಇಂಡಿಯಾಗೆ ಈತನೇ ಬೆನ್ನೆಲುಬು ಎಂದು ರೈನಾ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

"ನನ್ನ ಪ್ರಕಾರ, ಟೀಮ್ ಇಂಡಿಯಾ ಟೆಸ್ಟ್​ ತಂಡಕ್ಕೆ ರಿಷಭ್ ಪಂತ್​ ಬೆನ್ನೆಲುಬು. ಸತತವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಪಂತ್, ಸ್ಟಂಪ್ಸ್​ ಹಿಂದೆಯೂ ಅದ್ಭುತವಾಗಿದ್ದಾರೆ. ಇದು ಎದುರಾಳಿ ಬ್ಯಾಟರ್​ಗಳಿಗೆ ಸವಾಲಾಗಿ ಪರಿಣಮಿಸಿದೆ. ಬ್ಯಾಟ್ ಮತ್ತು ಗ್ಲೌಸ್​ನಿಂದ ತಂಡಕ್ಕೆ ಹೆಚ್ಚುವರಿ ಕೊಡುಗೆ ನೀಡುತ್ತಿರುವ ರಿಷಭ್​, ನಿಜಕ್ಕೂ ಪ್ರಸ್ತುತ ಟೆಸ್ಟ್​ ಟೀಮ್​ಗೆ ದೊಡ್ಡ ಶಕ್ತಿಯಾಗಿದ್ದಾರೆ. ಅವರ ಉತ್ತಮ ಬ್ಯಾಟಿಂಗ್, ಕೀಪಿಂಗ್ ಪ್ರದರ್ಶನ ಟೀಮ್ ಇಂಡಿಯಾದ ಯಶಸ್ಸಿಗೂ ಕಾರಣವಾಗಿದೆ" ಎಂದಿದ್ದಾರೆ.

4ನೇ ಟೆಸ್ಟ್​ಗೆ ಎರಡೂ ತಂಡಗಳು

ಭಾರತ: ಶುಭಮನ್ ಗಿಲ್ (ನಾಯಕ), ರಿಷಬ್ ಪಂತ್ (ಉಪನಾಯಕ, ವಿಕೆಟ್ ಕೀಪರ್​), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್​), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲದೀಪ್ ಯಾದವ್, ಅಂಶುಲ್ ಕಾಂಬೋಜ್.

ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಝಾಕ್ ಕ್ರಾಲಿ, ಲಿಯಾಮ್ ಡಾಸನ್, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಜೇಮಿ ಸ್ಮಿತ್ (ವಿಕೆಟ್​ ಕೀಪರ್), ಜೋಶ್ ಟಂಗ್, ಕ್ರಿಸ್ ವೋಕ್ಸ್.