ಕ್ರೀಡೆ

ಶ್ರೀಲಂಕಾ ಕ್ರಿಕೆಟ್​ ತಂಡಕ್ಕೆ ಮೂವರು ಭಿನ್ನ ನಾಯಕರ ನೇಮಕ!

ಕೊಲಂಬೊ: ಮುಂಬರುವ ಟಿ20 ವಿಶ್ವಕಪ್​ಗೆ ಪೂರ್ವಭಾವಿಯಾಗಿ ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ವಾನಿಂದು ಹಸರಂಗ ಅವರನ್ನು ಶ್ರೀಲಂಕಾ ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.

ಏಕದಿನ ತಂಡದ ನಾಯಕತ್ವದಿಂದ ದಸುನ್​ ಶನಕರನ್ನು ವಜಾಗೊಳಿಸಿ ಕುಸಲ್​ ಮೆಂಡಿಸ್​ಗೆ ಸಾರಥ್ಯದ ನೀಡಲಾಗಿದೆ. ಟೆಸ್ಟ್​ ತಂಡದ ನಾಯಕರಾಗಿ ದಿಮುತ್​ ಕರುಣರತ್ನೆ ಮುಂದುವರಿಯಲಿದ್ದು, ಇದೇ ಮೊದಲ ಬಾರಿಗೆ ಶ್ರೀಲಂಕಾ ತಂಡಕ್ಕೆ ಮೂರೂ ಪ್ರಕಾರದಲ್ಲಿ ಭಿನ್ನ ನಾಯಕರನ್ನು ನೇಮಿಸಲಾಗಿದೆ.