ಕ್ರೀಡೆ

VIDEO| ಆ್ಯಡ್​​ ಶೂಟ್​ ವೇಳೆ ಜಿಲೇಬಿ! 'ಅಡ್ಜೆಸ್ಟ್​ ಆಗಲು ಸಾಧ್ಯವಿಲ್ಲ' ಎಂದು ಸಹಾಯಕನ ಮೇಲೆ ಕೂಗಾಡಿದ ಹಾರ್ದಿಕ್​

ಮುಂಬೈ: ಭಾರತೀಯ ಕ್ರಿಕೆಟ್​ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ 2024ರ ಜಾಹೀರಾತು ಚಿತ್ರೀಕರಣದ ವೇಳೆ ಸಹಾಯಕ ಜಿಲೇಬಿ ತಂದುಕೊಟ್ಟರು ಎಂದು ಏರುಧ್ವನಿಯಲ್ಲಿ ಮಾತನಾಡಿದ ವಿಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಪಾಂಡ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೀಡಿಯೋ ಪ್ರಕಾರ, ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆದ ಹಾರ್ದಿಕ್​ ಮುಂಬರುವ ಐಪಿಎಲ್​ನ ಪಂದ್ಯಗಳಿಗೆ ಸದ್ಯ ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಐಪಿಎಲ್​ನ ಆ್ಯಡ್​ ಶೂಟ್​ಗಾಗಿ ಚಿತ್ರೀಕರಣದಲ್ಲಿ ತೊಡಗಿದ್ದ ಪಾಂಡ್ಯಗೆ ಸಹಾಯಕನೊಬ್ಬ ತಿನ್ನಲು ಜಿಲೇಬಿ, ಢೋಲ್ಕಾ ಕೊಟ್ಟಿದ್ದಾರೆ. ಇದನ್ನು ನೋಡಿದ ಹಾರ್ದಿಕ್, ಇದನ್ನು ಹೇಗೆ ತಿನ್ನಲಿ ಎಂದಿದ್ದಾರೆ. ಪ್ರತಿಕ್ರಿಯಿಸಿದ ಯುವಕ, "ಇವತ್ತಿಗೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಸರ್" ಎಂದು ಹೇಳಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ಪಾಂಡ್ಯ ಸಿಡಿಮಿಡಿಗೊಂಡಿದ್ದಾರೆ.

“ಇದೇನು? ನಾನು ಜಿಲೇಬಿ ಮತ್ತು ಧೋಕ್ಲಾವನ್ನು ಹೇಗೆ ತಿನ್ನಬೇಕು? ಫಿಟ್​ನೆಸ್ ಕಾಯ್ದುಕೊಳ್ಳಬೇಕು, ಇದನ್ನು ಹೇಗೆ ತಿನ್ನಲಿ, ಇದು ನನಗೆ ಸರಿಹೊಂದುವುದಿಲ್ಲ. ನನ್ನ ಚೆಫ್ ಮತ್ತು ಪೌಷ್ಟಿಕತಜ್ಞ ಎಲ್ಲಿದ್ದಾರೆ?, ನಾನು ಇದನ್ನು ಹೇಗೆ ನಿಭಾಯಿಸಬೇಕು, ಏನಿದು? ಇದೆಲ್ಲಾ ಕೆಲಸ ಮಾಡುವುದಿಲ್ಲ ಎಂದು ನಿರ್ದೇಶಕರಿಗೆ ತಿಳಿಸಿ" ಎಂದು ಹೇಳಿರುವ ವಿಡಿಯೋ ಸದ್ಯ ನೆಟ್ಟಿಗರಿಂದ ಭಾರೀ ವೀಕ್ಷಣೆಗೆ ಒಳಪಟ್ಟಿದೆ. ಆದರೆ, ಕೆಲವರು ಇಲ್ಲಿ ಬೇರೇನೆ ಇದೆ ಎಂದು ಅಭಿಪ್ರಾಯಿಸಿದ್ದಾರೆ.

"ನಮ್ಮ ಪ್ರಕಾರ ಇದು ಗಿಮಿಕ್​! ಸ್ಕ್ರಿಪ್ಟೆಡ್​​" ಎಂದು ವ್ಯಾಪಕವಾಗಿ ಕಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ,(ಏಜೆನ್ಸೀಸ್).