ಮುಂಬೈ: ಮೇ.17ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 17ನೇ ಆವೃತ್ತಿಯ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಭಾರೀ ಹಣಾಹಣಿಯಲ್ಲಿ ಕೆ.ಎಲ್. ರಾಹುಲ್ ಪಡೆ ಗೆದ್ದು ಬೀಗಿದ್ದೇ ಆದರೂ ಪ್ಲೇಆಫ್ ಪ್ರವೇಶ ಪಡೆಯಲು ವಿಫಲವಾಯಿತು. ಲೀಗ್ನಲ್ಲಿ ತಮ್ಮ ಕಡೆಯ ಪಂದ್ಯವನ್ನು ತವರಿನಲ್ಲೇ ಆಡಿದ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ ಕೇವಲ ಸೋಲು ಮಾತ್ರವಲ್ಲದೇ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಭಾರೀ ದಂಡದ ಹೊರೆ ಕೂಡ ಬಿದ್ದಿತು. ಇದು ಹಾರ್ದಿಕ್ಗೆ ಬ್ಯಾಡ್ ಲಕ್ ಆಗಿ ತಿರುಗಿದೆ.
ಮೊದಲೇ ತಮ್ಮ ತಂಡದ ಸೋಲಿನಿಂದ ಕಂಗೆಟ್ಟಿದ್ದ ನಾಯಕ ಹಾರ್ದಿಕ್ಗೆ ಪಂದ್ಯದಲ್ಲಿ ಮಂದಗತಿಯ ಓವರ್ ರೇಟ್ ಮಾಡಿದ್ದಕ್ಕಾಗಿ ಭಾರೀ ದಂಡವನ್ನು ಪಡೆದರು. 17ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಮಾಡಿದ ಮೂರನೇ ಸ್ಲೋ ಓವರ್ ರೇಟ್ ಅದಾದ ಕಾರಣ, ನಾಯಕನ ಜವಾಬ್ದಾರಿ ಹೊತ್ತ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ಇದರೊಟ್ಟಿಗೆ ಮುಂಬರುವ ಐಪಿಎಲ್ 2025ರ ಆವೃತ್ತಿಯ ಮೊದಲ ಪಂದ್ಯದಿಂದ ನಿಷೇಧಿಸುವುದಾಗಿ ತಿಳಿಸಿತು.
ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ಗೆ 30 ಲಕ್ಷ ರೂ. ದಂಡ ವಿಧಿಸಿದ ಐಪಿಎಲ್ ಮಂಡಳಿ, ತಂಡದ ಪ್ರತಿ ಆಟಗಾರರಿಗೆ ತಲಾ 12 ಲಕ್ಷ ರೂ. ದಂಡ ವಿಧಿಸಿತ್ತು. ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕನಾಗಿದ್ದ ರಿಷಭ್ ಪಂತ್ಗೂ ಪೆನಾಲ್ಟಿ ಹಾಕಿ, ಆರ್ಸಿಬಿ ವಿರುದ್ಧದ ಪಂದ್ಯದಿಂದ ಹೊರಗಿಡಲಾಗಿತ್ತು. ಆ ಪಂದ್ಯದಲ್ಲಿ ರಿಷಭ್ ಇಲ್ಲದೆ, ಡೆಲ್ಲಿ ಹೀನಾಯ ಸೋಲು ಅನುಭವಿಸಿ, ತಮ್ಮ ಪ್ಲೇಆಫ್ ಆಸೆಯಿಂದ ದೂರ ಸರಿಯಿತು. ಮುಂಬರುವ 18ನೇ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಮುಂದುವರೆಯಲಿದ್ದಾರೆ ಎಂಬ ಸುದ್ದಿಗಳು ಹೊರಬಿದ್ದಿವೆ. ಆದರೆ, ನಿಯಮದ ಅನುಸಾರ ಮೊದಲ ಪಂದ್ಯದಿಂದ ಮಾತ್ರ ಅವರು ಹೊರಗುಳಿಯಲಿದ್ದಾರೆ,(ಏಜೆನ್ಸೀಸ್).