ಕ್ರೀಡೆ

VIDEO| ಹರ್ಭಜನ್​ ಶೇರ್​ ಮಾಡಿರೋ ವ್ಯಾಯಾಮ ವಿಡಿಯೋವನ್ನು ನೀವು ಟ್ರೈ ಮಾಡ್ಬೇಡಿ, ನಿಮ್ಗೇ ಒಳ್ಳೇದು!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಟೀಮ್​ ಇಂಡಿಯಾದ ಮಾಜಿ ಸ್ಪಿನ್​ ಮಾಂತ್ರಿಕ ಹರ್ಭಜನ್​ ಸಿಂಗ್ ಆಗಾಗ ಫನ್​ ಮಾಡುತ್ತಿರುತ್ತಾರೆ. ಕರೊನಾ ವೈರಸ್​ ಹರಡಿದ ಬೆನ್ನಲ್ಲೇ ಇಮ್ಯುನಿಟಿ ಹೆಚ್ಚಿಸಿಕೊಳ್ಳಿ ಎಂಬ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ​ ಹರ್ಭಜನ್​ ಸಹ ಸಲಹೆಯೊಂದನ್ನು ನೀಡಿದ್ದಾರೆ.

ಶನಿವಾರ 20 ಸೆಕೆಂಡ್​ವುಳ್ಳ ವ್ಯಾಯಾಮದ ವಿಡಿಯೋ ಶೇರ್​ ಮಾಡಿಕೊಂಡಿರುವ ಹರ್ಭಜನ್​, ಇದನ್ನು ಅನುಸರಿಸಿ ನಿಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಿ ಹಾಗೂ ನಿಮ್ಮ ಇಮ್ಯೂನಿಟಿಯನ್ನು ಹೆಚ್ಚಿಸಿಕೊಳ್ಳಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಇದನ್ನೂ ಓದಿ: VIDEO| ನಮ್ಮ ಯೋಧರನ್ನು ಕೊಂದ ಚೀನಾಗೆ ಪಾಠ ಕಲಿಸಲು ಗಡಿಯತ್ತ ಬಾಲಕರ ಪ್ರಯಾಣ: ಮುಂದೇನಾಯ್ತು?

ಹರ್ಭಜನ್​ ಹೇಳಿದರೂ ಎಂದು ವ್ಯಾಯಮಾ ಮಾಡುವ ಮುನ್ನ ಒಂದು ಬಾರಿ ವಿಡಿಯೋ ನೋಡಿದರೆ ಒಳಿತು. ನೀವು ಅಂದುಕೊಂಡಷ್ಟು ವ್ಯಾಯಾಮ ಸುಲಭವಾಗಿಲ್ಲ. ವಿಡಿಯೋದಲ್ಲಿರುವ ವ್ಯಕ್ತಿಯೊಬ್ಬ ಮಾಡುವ ವ್ಯಾಯಾಮವನ್ನು ನೋಡಿದರೆ ಒಂದು ಕ್ಷಣ ನಂಬಲಾಗಲ್ಲ. ಹುಬ್ಬೇರಿಸುವುದು ಖಂಡಿತ. ಕೇವಲ ಎರಡೇ ಕೈಗಳಿಂದ ಇಡೀ ದೇಹವನ್ನೇ ಹೇಗೆ ಬೇಕೆಂದರೆ ಬಳುಕಿಸುವ ವ್ಯಕ್ತಿಯನ್ನು ನೋಡಿದರೆ ಆತನ ಮೈಯಲ್ಲಿ ಮೂಳೆ ಇದೆಯೋ? ಇಲ್ಲವೋ? ಎಂಬ ಸಂಶಯ ಬರುವುದು ಸಹಜ. ಕೂತೂಹಲವಿದ್ದರೆ ನೀವು ಒಮ್ಮೆ ವಿಡಿಯೋ ನೋಡಿ ಬಿಡಿ.

ಹರ್ಭಜನ್​ ಶೇರ್​ ಮಾಡಿಕೊಂಡಿರುವ ವಿಡಿಯೋವನ್ನು ಈಗಾಗಲೇ ಮೂರುವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 34 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ. 3 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್​ ಆಗಿದೆ. ವಿಡಿಯೋ ನೋಡಿದ ನಿಮಗೆ ಏನನಿಸುತ್ತದೆಯೋ ಕಾಮೆಂಟ್​ ಮಾಡಿ. (ಏಜೆನ್ಸೀಸ್​) ಇದನ್ನೂ ಓದಿ: ವ್ಹೀಲಿಂಗ್​ ಮಾಡುವಾಗ ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿ ಮೂವರ ಸಾವು