More

    ಆಕಾಶದಿಂದ ಉದುರಿದ ಮುಖವಾಡದಂಥ ನಿಗೂಢ ವಸ್ತು!

    ಜೇಲೋರ್​ (ರಾಜಸ್ಥಾನ): 2020ನೇ ಇಸವಿಯಲ್ಲಿ ಏನೇನೋ ಅನಾಹುತಗಳು, ಏನೇನೋ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇವೆ.

    ಇದಕ್ಕೊಂದು ಸೇರ್ಪಡೆ ಇದೀಗ ಆಕಾಶದಿಂದ ಉದುರಿದ ನಿಗೂಢ ವಸ್ತು! ಹೌದು. ರಾಜಸ್ಥಾನದ ಸಂಚೋರ್‌ ಜಿಲ್ಲೆಯ ಜೇಲೋರ್‌ ಗ್ರಾಮದಲ್ಲಿ ಕಳೆದ ಶುಕ್ರವಾರ ಇಂಥದ್ದೊಂದು ಘಟನೆ ನಡೆದಿದ್ದು, ಇಡೀ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ.

    ಬೆಳಗ್ಗೆ ಸುಮಾರು 7 ಗಂಟೆಯ ಹೊತ್ತಿಗೆ ಆಕಾಶದಿಂದ ಉಲ್ಕಾಶಿಲೆಯಂಥ ನಿಗೂಢ ವಸ್ತು ಬಿದ್ದಿದೆ. ಇದು ಬೀಳುವ ಸಮಯದಲ್ಲಿ ಭಾರಿ ಸ್ಫೋಟಗೊಂಡಂಥ ಶಬ್ದವಾಗಿದ್ದು, ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಈ ಶಬ್ದ ಕೇಳಿಸಿದೆ. ಮನೆಯಲ್ಲ ಕಂಪಿಸಿದ ಕಾರಣ, ಭಯಭೀತರಾದ ಜನರು ಮನೆಯಿಂದ ಹೊರಕ್ಕೆ ಓಡೋಡಿ ಬಂದಿದ್ದಾರೆ. ಆದರೆ ಅವರಿಗೆ ಏನೊಂದು ತಿಳಿಯದಾಗಿದೆ.

    ಇದನ್ನೂ ಓದಿ: ಅಮೆರಿಕದಲ್ಲಿ ಸಿಕ್ಕಿಬಿದ್ದ ಮುಂಬೈ ದಾಳಿ​ ಸಂಚುಕೋರ

    ಈ ಸುದ್ದಿ ಮಿಂಚಿನಂತ ಹರಡುತ್ತಲೇ ಈ ಶಬ್ದದ ಬೆನ್ನಟ್ಟಿ ಹೋದಾಗ ಅಲ್ಲೊಂದು ಕಡೆ ಮುಖವಾಡದ ರೂಪದಲ್ಲಿರುವ ಈ ವಸ್ತು ಬಿದ್ದಿರುವುದು ಕಂಡಿದೆ. ಇದು 2.8 ಕೆ.ಜಿ. ತೂಕವಿದೆ ಎಂದು ಸ್ಥಳೀಯರು ಹೇಳುತ್ತಾರೆ.

    ಈ ಕುರಿತು ಪೊಲೀಸರಿಗೆ ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ, ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಹೋಗಿ ನೋಡಿದಾಗ ಅದು ಕಲ್ಲಿನಂಥ ವಸ್ತುವಾಗಿರುವುದನ್ನು ಮನಗಂಡಿದ್ದಾರೆ. ಅಷ್ಟು ಹೊತ್ತಾದರೂ ಅದು ಬಿಸಿಯನ್ನು ಉಗುಳುತ್ತಿತ್ತು ಎಂದು ಹೇಳಲಾಗಿದೆ. ನೋಡಲು ಉಲ್ಕಾಶಿಲೆಯಂತೆ ಈ ವಸ್ತು ಇರುವುದಾಗಿ ಅದರ ಫೋಟೋಅನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ.

    https://twitter.com/niku1630/status/1274161733821554690

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts