More

    ಅಮೆರಿಕದಲ್ಲಿ ಸಿಕ್ಕಿಬಿದ್ದ ಮುಂಬೈ ದಾಳಿ​ ಸಂಚುಕೋರ

    ನವದೆಹಲಿ: 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭೀಕರ ದಾಳಿ ಪ್ರಕರಣದ (26/11) ಸೂತ್ರಧಾರ ಅಮೆರಿಕದ ಲಾಸ್​ ಏಜಂಲೀಸ್​ನಲ್ಲಿ ಪುನಃ ಬಂಧಿಸಲಾಗಿದೆ. ತಹವೂರ್​ ರಾಣಾ ಎಂಬ 59 ವರ್ಷದ ಈತ ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿದ್ದಾನೆ.

    ಈತ ಅಮೆರಿಕದ ಜೈಲಿನಲ್ಲಿ 14 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದ. ಲಾಸ್ ಏಂಜಲೀಸ್​ನ ಫೆಡೆರಲ್ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಈತನಿಗೆ ಕರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ತನ್ನನ್ನು ಬಿಡುಗಡೆ ಮಾಡುವಂತೆ ಕೋರಿದ್ದ. ಹೀಗೆ ಕರೊನಾದ ಹೆಸರು ಹೇಳಿಕೊಂಡು ಸುಲಭದಲ್ಲಿ ತಪ್ಪಿಸಿಕೊಳ್ಳುವ ಯೋಜನೆ ರೂಪಿಸಿದ್ದ. ಸೋಂಕಿನ ಲಕ್ಷಣಗಳು ಇರುವ ಹಿನ್ನೆಲೆಯಲ್ಲಿ ಕೋರ್ಟ್​ ಕೂಡ ಆತನ ವಾದವನ್ನು ಮಾನ್ಯ ಮಾಡಿತ್ತು.

    ಇನ್ನೇನು ಅವನ ಪ್ಲ್ಯಾನ್​ ಯಶಸ್ವಿಯಾಗುವುದರಲ್ಲಿತ್ತು. ಆದರೆ ಇದೇ ವೇಳೆ, 166 ಮಂದಿಯನ್ನು ಬಲಿ ಪಡೆದ ಭೀಕರ ಪ್ರಕರಣದ ಸೂತ್ರಧಾರನಾಗಿರುವ ಈತನನ್ನು ಬಿಡುಗಡೆ ಮಾಡಬಾರದು ಎಂದು ಭಾರತ ಸರ್ಕಾರ ಅಮೆರಿಕ ಕೋರ್ಟ್​ ಅನ್ನು ಕೋರಿದೆ. ಈತನ ವಿರುದ್ಧ ಹಲವಾರು ಅಪರಾಧಿಕ ಕೇಸ್​ಗಳು ಭಾರತದಲ್ಲಿ ಇರುವ ಕಾರಣ, ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಕೋರಿಕೊಂಡಿದೆ.

    ಇದನ್ನೂ ಓದಿ: LIVE| ಸೂರ್ಯಗ್ರಹಣ: ನಭೋಮಂಡಲದ ಕೌತುಕವನ್ನು ನೇರಪ್ರಸಾರದಲ್ಲಿ ವೀಕ್ಷಿಸಿ…!

    ಈ ಹಿನ್ನೆಲೆಯಲ್ಲಿ ಪುನಃ ಬಂಧಿಸಿರುವ ಅಮೆರಿಕ ಪೊಲೀಸರು ಈತನನ್ನು ಜೈಲಿಗೆ ಕಳುಹಿಸಿದ್ದಾರೆ. ಈತನನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆಗಳು ಚಾಲನೆಯಲ್ಲಿರುವ ಕಾರಣ ರಾಣಾನನ್ನು ಜೈಲಿನಿಂದ ಹೊರಬಿಟ್ಟಿರಲಿಲ್ಲ ಎಂಬ ಮಾಹಿತಿಯನ್ನು ಅಮೆರಿಕ ವಕೀಲರು ಅಸೋಸಿಯೇಟ್ ಪ್ರೆಸ್ ಗೆ ನೀಡಿದ್ದಾರೆ. ಈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಹೆಡ್ಲಿಗೆ ಈತ ಅತ್ಯಂತ ಹತ್ತಿರ ನಿಕಟವರ್ತಿ ಎನ್ನಲಾಗಿದೆ.

    ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವ ನಿಟ್ಟಿನಲ್ಲಿ ಇನ್ನು ಅಲ್ಲಿ ವಿಚಾರಣೆ ಪ್ರಾರಂಭಗೊಳ್ಳಲಿದೆ ಎಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಹೇಳಿದ್ದಾರೆ. ಮುಂಬೈ ದಾಳಿಯ ಪ್ರಮುಖ ರೂವಾರಿ ಡೇವಿಡ್ ಹೆಡ್ಲಿ ಈ ದಾಳಿ ನಡೆಸಲು ಸಂಚು ರೂಪಿಸುವ ಸಮಯದಲ್ಲಿ ರಾಣಾ ಈತನಿಗೆ ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಒದಗಿಸಿದ್ದ. 2006 ಮತ್ತು 2008ರ ನಡುವಿನ ಅವಧಿಯಲ್ಲಿ ದಾಳಿಯ ಕುರಿತು ಸ್ಕೆಚ್​ ತಯಾರಿಸಲು ರಾಣಾ ಎಲ್ಲಾ ದಾಖಲೆಗಳನ್ನು ನೀಡಿದ್ದ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಈತನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್​)

    ಮೈ ಜಿಂದಾ ಹೂಂ… ಪತ್ನಿಗೆ ಕರೆ ಮಾಡಿದ ‘ಹುತಾತ್ಮ’ ಯೋಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts