More

    ವಿಶ್ವದ ಅತ್ಯಂತ ನಿಗೂಢ ಅರಣ್ಯಗಳಿವು! ಇಲ್ಲಿಗೆ ಹೋದ್ರೆ ಸಾವಿನಿಂದ ಎಸ್ಕೇಪ್​ ಆಗಲು ಸಾಧ್ಯವಿಲ್ಲ

    ಇಡೀ ಜಗತ್ತು ಅನೇಕ ಅಚ್ಚರಿಗಳು ಆಗರ ಮತ್ತು ನಿಗೂಢಗಳ ಸಾಗರ. ವಿಶ್ವದಲ್ಲಿ ಇನ್ನೂ ತಿಳಿಯಲಾಗದ ಅದೆಷ್ಟೋ ರಹಸ್ಯಗಳಿವೆ ಮತ್ತು ಭಯಾನಕ ಸಂಗತಿಗಳಿವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಕಣ್ಣುಗಳ ಹುಬ್ಬು ಒಂದು ಕ್ಷಣ ಮೇಲೇರುತ್ತದೆ. ಈ ಪ್ರಪಂಚದಲ್ಲಿ ನಿಗೂಢ ಅಲೌಕಿಕ ಅರಣ್ಯಗಳು ಕೂಡ ಇವೆ. ಇಲ್ಲಿಗೆ ಹೋದವರು ಯಾರೂ ಕೂಡ ಜೀವಂತವಾಗಿ ವಾಪಸ್ ಬರುವುದಿಲ್ಲ ಎಂಬ ನಂಬಿಕೆ ಇದೆ. ಈ ಸ್ಟೋರಿಯಲ್ಲಿ ನೀವು ಪ್ರಪಂಚದ ಕೆಲವು ಅತ್ಯಂತ ಅಪಾಯಕಾರಿ ಮತ್ತು ನಿಗೂಢ ಅರಣ್ಯಗಳ ಬಗ್ಗೆ ತಿಳಿದುಕೊಳ್ಳಬಹುದು.

    ನಾವು ಅರಣ್ಯಗಳ ಬಗ್ಗೆ ಯೋಚಿಸಿದಾಗ, ನಮ್ಮ ನೆನಪಿಗೆ ಬರುವ ಮೊದಲ ಸಂಗತಿಯೆಂದರೆ ಅದು ಅಚ್ಚ ಹಸಿರು. ಅರಣ್ಯದ ನೈಸರ್ಗಿಕ ಪರಿಸರ, ಹಸಿರು ಮರಗಳು ಮತ್ತು ಸುಂದರವಾದ ದೃಶ್ಯಗಳನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಎಲ್ಲ ಕಾಡುಗಳು ಕೇವಲ ಸುಂದರವಾಗಿಲ್ಲ, ಕೆಲವು ಕಾಡುಗಳು ಸಾಕಷ್ಟು ಭಯಾನಕ ರಹಸ್ಯಗಳನ್ನೂ ಸಹ ಹೊಂದಿವೆ. ಅಂದಹಾಗೆ ಒಂದು ದೇಶದ ಸಂಪತ್ತನ್ನು ಅದರ ಅರಣ್ಯ ಸಂಪೂನ್ಮೂಲದಿಂದಲೂ ಅಳೆಯುತ್ತಾರೆ. ಆದಾಗ್ಯೂ, ಪ್ರಪಂಚದ ಕೆಲವು ಕಾಡುಗಳು ಪ್ರಕೃತಿಯನ್ನು ಮೀರಿದ ನಿಗೂಢ ವಿಷಯಗಳನ್ನು ಒಳಗೊಂಡಿವೆ. ಈ ಕಾಡುಗಳಲ್ಲಿ ಅನ್ವೇಷಿಸಲು ತುಂಬಾ ಧೈರ್ಯ ಬೇಕಾಗುತ್ತದೆ. ತುಂಬಾ ಭಯ ಇರುವವರು ಸಾಮಾನ್ಯವಾಗಿ ಈ ಕಾಡುಗಳಿಗೆ ಭೇಟಿ ನೀಡುವುದನ್ನು ತಪ್ಪಿಸುತ್ತಾರೆ. ಆ ಕಾಡುಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

    ಜಪಾನ್​ನ ಅಕಿಗಹರಾ ಅರಣ್ಯ
    ಸೂರ್ಯೋದಯದ ನಾಡು ಜಪಾನ್‌ನಲ್ಲಿರುವ ಅಕಿಗಹರಾ ಅರಣ್ಯವು ವಿಶ್ವದ ಅತ್ಯಂತ ಭೂತದ ಕಾಡುಗಳಲ್ಲಿ ಒಂದಾಗಿದೆ. ಈ ಕಾಡಿನಲ್ಲಿ ನಡೆದಿರುವ ಅಸಂಖ್ಯಾತ ಆತ್ಮಹತ್ಯೆಗಳೇ ಇದಕ್ಕೆ ಕಾರಣ ಎನ್ನುತ್ತಾರೆ ಇಲ್ಲಿನ ಸ್ಥಳೀಯ ಜನ. ಇಲ್ಲಿ ದಟ್ಟವಾದ ಮರಗಳು ಮತ್ತು ನೀರವ ಮೌನವಿದೆ, ಆದರೆ ಈ ಅರಣ್ಯವು ಭೇಟಿ ನೀಡುವವರನ್ನು ಹೆದರಿಸುವ ಅನೇಕ ಅಸಾಮಾನ್ಯ ಚಟುವಟಿಕೆಗಳನ್ನು ಹೊಂದಿದೆ.

    ರೊಮೇನಿಯಾದ ಹೋಯಾ ಬಾಸಿಯು ಅರಣ್ಯ
    ಕೇಂದ್ರ ರೊಮೇನಿಯಾದ ಟ್ರಾನ್ಸಿಲ್ವೇನಿಯಾದ ಬರ್ಮುಡಾ ಟ್ರಯಾಂಗಲ್ ಎಂದೂ ಕರೆಯಲ್ಪಡುವ ಹೋಯಾ ಬಾಸಿಯು ಕಾಡಿನಲ್ಲಿ ಸಾಕಷ್ಟು ನಿಗೂಢಗಳು ಅಡಗಿವೆ. ಏಲಿಯನ್ಸ್​ ಅಂತರಿಕ್ಷನೌಕೆಗಳು, ವ್ಯಕ್ತಿಗಳ ದಿಢೀರ್​ ಕಣ್ಮರೆಗಳು ಮತ್ತು ಭೂತ ಚೇಷ್ಟೆಯಂತಹ ವಿವಿಧ ನಿಗೂಢ ಚಟುವಟಿಕೆಗಳಿಗೆ ಇದು ಪ್ರಸಿದ್ಧವಾಗಿದೆ.

    ಐರ್ಲೆಂಡ್​ನ ಬಲ್ಲಿಪೋಲಿ ಕಾಡು
    ಬಲ್ಲಿಪೋಲಿ ಅರಣ್ಯದಲ್ಲಿ ಬಿಳಿ ಬಣ್ಣದಲ್ಲಿ ಕಾಣುವ ಮಹಿಳೆಯೊಬ್ಬಳ ಆಕಾರವು ಅನೇಕ ಸಂದರ್ಶಕರಲ್ಲಿ ಭಯ ಉಂಟು ಮಾಡಿದೆ ಎಂದು ಹೇಳಲಾಗುತ್ತದೆ. ಈ ಅರಣ್ಯವು ಪ್ರಪಂಚದ ಅಸಾಮಾನ್ಯ ಅರಣ್ಯಗಳಲ್ಲಿ ಒಂದಾಗಿದೆ, ಅನೇಕ ಸ್ಥಳೀಯರು ಇಲ್ಲಿ ವಿಚಿತ್ರವಾದ ದೀಪಗಳು ಮತ್ತು ಪ್ರೇತಗಳನ್ನು ನೋಡಿರುವುದಾಗಿ ಹೇಳಿಕೊಳ್ಳುತ್ತಾರೆ.

    ಇಂಗ್ಲೆಂಡ್​ನ ಡೆರಿಂಗ್ ವುಡ್ಸ್ ಅರಣ್ಯ
    ಡೆರಿಂಗ್ ವುಡ್ಸ್ ಅರಣ್ಯವನ್ನು ಸ್ಕ್ರೀಮಿಂಗ್​ ವುಡ್ಸ್​ ಎಂತಲೂ ಕರೆಯುತ್ತಾರೆ. ದುರಂತದಿಂದ ಸಾವಿಗೀಡಾದ ಅನೇಕ ಆತ್ಮಗಳು ಇಲ್ಲಿವೆ ಎನ್ನಲಾಗಿದೆ. ಸಾಕಷ್ಟು ಮಂದಿ ಇಲ್ಲಿ ಭಯಾನಕ ಅನುಭವ ಅನುಭವಿಸಿದ್ದಾರೆ. ರಾತ್ರಿಯಲ್ಲಿ ಅಳುವ ಧ್ವನಿಗಳು ಮತ್ತು ದೇಹವನ್ನು ಕಳೆದುಕೊಂಡ ಕಿರುಚಾಟಗಳನ್ನು ಕೇಳುವುದಾಗಿ ಸ್ಥಳೀಯ ಜನರು ತಿಳಿಸಿದ್ದಾರೆ.

    ಇಂಗ್ಲೆಂಡ್​ ಬೋರ್ಲಿ ರೆಕ್ಟರಿ ವುಡ್ಸ್
    ಬೋರ್ಲಿ ರೆಕ್ಟರಿ ವುಡ್ಸ್ ಇಂಗ್ಲೆಂಡ್‌ನ ಅತ್ಯಂತ ಅಪಾಯಕಾರಿ ಭೂತದ ಮನೆ ಎಂದು ಕರೆಯಲ್ಪಡುವ ಬೋರ್ಲಿ ರೆಕ್ಟರಿಯ ಸಮೀಪದಲ್ಲಿದೆ. ಇಲ್ಲಿ ಅನೇಕ ಅಗೋಚರ ಶಕ್ತಿಗಳು ಸುತ್ತಾಡುತ್ತವೆ ಎಂದು ನಂಬಲಾಗಿದೆ. ಈ ಸ್ಥಳದ ಬಗ್ಗೆ ಸಾಕಷ್ಟು ಕರಾಳ ಕತೆಗಳಿವೆ. ಈ ಪ್ರದೇಶದಲ್ಲಿ ದುರಂತ ಸಾವಿಗೀಡಾದವರ ಆತ್ಮಗಳು ಮರಗಳ ಜತೆ ಕಾಲಹರಣ ಮಾಡುತ್ತವೆ ಎಂದು ಹೇಳಲಾಗುತ್ತದೆ. (ಏಜೆನ್ಸೀಸ್​)

    ಕ್ಷಮಿಸು ಅಮ್ಮ… ನನಗೆ ಗೊತ್ತಿಲ್ಲದೆ ದೊಡ್ಡ ತಪ್ಪು ಮಾಡಿದೆ: ಹಿರಿಯ ನಟಿ ಲಕ್ಷ್ಮೀ ಪುತ್ರಿ ಐಶ್ವರ್ಯಾ ಕಣ್ಣೀರು

    ಇಲ್ಲಿ ಕೇವಲ ಒಂದು ರೂಪಾಯಿಯಲ್ಲಿ ಮದುವೆ ಮಾಡಿಕೊಡ್ತಾರೆ! ಆದರೆ ಒಂದು ಕಂಡೀಷನ್​

    ಮೌತ್ ಫ್ರೆಶ್ನರ್​ ಸೇವಿಸಿದ ನಂತ್ರ ರಕ್ತ ವಾಂತಿ ಮಾಡ್ಕೊಂಡ ಐವರು ಸ್ನೇಹಿತರು! ವೈದ್ಯರಿಂದ ಶಾಕಿಂಗ್​ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts