More

    ಕರೊನಾ: ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಗೆ ರೇಟ್​ ಫಿಕ್ಸ್​- ಇಲ್ಲಿದೆ ಮಾಹಿತಿ

    ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಲ್ಲಿಯವರೆಗೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

    ಹಲವರು ತಮಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬೇಕೆಂದು ಕೋರಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ ಕೊರತೆ ಇನ್ನೊಂದೆಡೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆಗಾಗಿ ಅವಕಾಶವನ್ನು ಮಾಡಿಕೊಡಲಾಗಿದೆ.

    ಇದನ್ನೂ ಓದಿ: ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರೂ ಬದುಕಿಸಿಕೊಂಡ 55ರ ಮಗ

    ಸಹಜವಾಗಿ ಖಾಸಗಿ ಆಸ್ಪತ್ರೆಗಳು ಎಂದರೆ ಅಲ್ಲಿ ದುಬಾರಿ ಬೆಲೆ ಇದ್ದೇ ಇರುತ್ತದೆ ಎಂಬ ಕಾರಣಕ್ಕೆ, ಚಿಕಿತ್ಸೆಗೆ ನಿಜವಾಗಿ ತಗಲುವ ಖರ್ಚು-ವೆಚ್ಚ ಇತ್ಯಾದಿಗಳ ಆಧಾರದ ಮೇಲೆ ಇದೀಗ ರೇಟ್​ ಫಿಕ್ಸ್​ ಮಾಡಿದೆ. ಆ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಆದರೆ ಈ ದರದ ಬಗ್ಗೆ ಸರ್ಕಾರ ಖಾಸಗಿ ಆಸ್ಪತ್ರೆಗಳ ಜತೆ ಸಮಾಲೋಚನೆ ನಡೆಸಬೇಕಿದೆ. ಈ ದರಕ್ಕೆ ಅವುಗಳ ಒಪ್ಪಿಕೊಂಡರೆ ಅಧಿಕೃತ ಆದೇಶ ಹೊರಬೀಳಲಿದೆ. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಇದಕ್ಕೆ ಒಪ್ಪಿಕೊಂಡರೆ ಇನ್ನು ಖಾಸಗಿ ಆಸ್ಪತ್ರೆಗಳಲ್ಲಿಯೂ ಸೋಂಕಿತರು ಚಿಕಿತ್ಸೆ ಪಡೆಯಬಹುದಾಗಿದೆ.


    ಹಾಗಿದ್ದರೆ ಯಾವ್ಯಾವುದಕ್ಕೆ ಎಷ್ಟೆಷ್ಟು ರೇಟ್​ ಇದೆ? ಇಲ್ಲಿದೆ ಮಾಹಿತಿ

    ಒಂದು ದಿನದ ಚಿಕಿತ್ಸೆಗೆ ತಗಲುವ ಮಾಹಿತಿ:

    ಜನರಲ್ ವಾರ್ಡ್: ₹ 5,200
    ಜನರಲ್ ವಾರ್ಡ್ ವಿತ್ ಆಕ್ಸಿಜನ್: ₹ 7,500
    ಐಸೋಲೇಷನ್ ವಾರ್ಡ್: ₹ 8,500
    ಐಸಿಯು ವಿಥ್​ ವೆಂಟಿಲೇಟರ್: ₹12,000
    ಗಂಟಲು ದ್ರವ ಪರೀಕ್ಷೆಗ: ₹2,600

     

    ಚೀನಾ ಗಲಾಟೆ: ರಾಮಮಂದಿರ ನಿರ್ಮಾಣ ತಾತ್ಕಾಲಿಕ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts