More

    ಪ್ರಾಥಮಿಕ ಹಂತದಲ್ಲಿಯೇ ಕಾಯಿಲೆಗೆ ಚಿಕಿತ್ಸೆ ಪಡೆಯುವುದು ಒಳಿತು

    ಬನ್ನೂರು: ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಕಾಯಿಲೆಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ರೋಟರಿ ಮಾಜಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ತಿಳಿಸಿದರು.

    ಪಟ್ಟಣದ ರೋಟರಿ ಸಂಸ್ಥೆ ಆವರಣದಲ್ಲಿ ಶನಿವಾರ ನಿರ್ಮಲಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ನಿರ್ಮಲಾ ೌಂಡೇಷನ್ ವತಿಯಿಂದ ಆಯೋಜಿಸಿದ್ದ ವೈದ್ಯಕೀಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

    ಪ್ರತಿಯೊಬ್ಬರ ಬದುಕಿನಲ್ಲೂ ಆರೋಗ್ಯ ಮುಖ್ಯ. ಸಕ್ಕರೆಕಾಯಿಲೆ, ರಕ್ತದೊತ್ತಡ ಶ್ರೀಮಂತರ ಕಾಯಿಲೆ ಎನ್ನುವ ಒಂದು ಕಾಲ ಇತ್ತು. ಆದರೆ ಈಗ ಕಾಲ ಬದಲಾಗಿದ್ದು ಬಡವರು, ಮಕ್ಕಳು ಎನ್ನದೇ ಎಲ್ಲರೂ ಇಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

    ರೋಟರಿ ಸಂಸ್ಥೆ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿದರು. ಶಿಬಿರದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ವೈರಲ್ ಜ್ವರ, ಥೈರಾಡ್ ಸಮಸ್ಯೆ, ಉಸಿರಾಟದ ತೊಂದರೆ, ಕುತ್ತಿಗೆ, ಬೆನ್ನು ನೋವು, ಅಲರ್ಜಿ ಸೇರಿದಂತೆ ಅನೇಕ ರೋಗಗಳನ್ನು ತಪಾಸಣೆ ಮಾಡಿ ಔಷಧ ನೀಡಲಾಯಿತು. ಸೀಯರು ಹಾಗೂ ಮಕ್ಕಳ ಸಮಸ್ಯೆಗಳಿಗೆ ಸಂಬಂಸಿದಂತೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಲಾಯಿತು.

    ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಪ್ರಸನ್ನ, ಅತ್ತಹಳ್ಳಿ ಕೆಂಪೇಗೌಡ, ಡಾ.ನಿರ್ಮಲಾ, ಡಾ.ಮುಕುಂದ, ಡಾ. ಕೃಷ್ಣಕುಮಾರ್, ಡಾ.ಕುಮಾರ್, ನಾಗೇಂದ್ರ, ರಾಕೇಶ್, ಬಸವನಹಳ್ಳಿ ರಾಜು, ವೆಂಕಟೇಶ್, ಡಾ.ರಾಜೀವ್, ನಾಗರಾಜು, ನವೀನ್, ವಡ್ಗಲಿಗೌಡ, ಮುರಳಿಗೋಪಾಲ್, ಮಾಣಿಕ್‌ಚಂದ್‌ಚೌಧರಿ, ರಾಜೇಂದ್ರ, ನಂಜುಂಡಸ್ವಾಮಿ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts