ಕ್ರೀಡೆ

ಮಾದಕ ಫೋಟೋ ಹರಿಬಿಟ್ಟ ಹರ್ಭಜನ್​ ಪತ್ನಿ! ಗೀತಾ ಬಸ್ರ​ ಹಾಟ್​ ಅವತಾರ ಕಂಡು ಫ್ಯಾನ್ಸ್​ ಕ್ಲೀನ್​ ಬೋಲ್ಡ್​

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್​ ಪತ್ನಿ ಗೀತಾ ಬಸ್ರ ಅವರು ಹಾಟ್​ ಫೋಟೋ ಹರಿಬಿಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.​​

ಕಪ್ಪು ಬಣ್ಣದ ಈಜುಡುಗೆ ಧರಿಸಿ, ಸ್ವಿಮ್ಮಿಂಗ್​ಪೂಲ್​ ಒಳಗೆ ಮಾದಕ ಭಂಗಿಯಲ್ಲಿ ನಿಂತು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಟೋ ಪೋಸ್ಟ್​ ಮಾಡಿದ್ದು, ಹಲೋ 2024 ಎಂದು ಅಡಿಬರಹ ನೀಡಿದ್ದಾರೆ. ಮಾದಕ ನೋಟದಿಂದಲೇ 2024 ಅನ್ನು ಗೀತಾ ಬಸ್ರ ಅವರು ಬರಮಾಡಿಕೊಂಡಿದ್ದಾರೆ.

ಅಂದಹಾಗೆ ಗೀತಾ ಬಸ್ರಾ ಅವರು ಇಂಗ್ಲೆಂಡ್​ನಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದರು. ಬಾಲಿವುಡ್​ಗೆ ಕಾಲಿಟ್ಟ ಗೀತಾ ಅವರ ಮೇಲೆ ಹರ್ಭಜನ್​ ಕಣ್ಣು ಬಿದ್ದಿತು. ದಿ ಟ್ರೈನ್​ ಸಿನಿಮಾದಲ್ಲಿ ವೋಹ್​ ಅಜ್ನಾಬೀ ಮ್ಯೂಸಿಕ್​ ವಿಡಿಯೋ ಸಾಂಗ್​ನಿಂದ ಮನಸೋತ ಹರ್ಭಜನ್​, ಅಷ್ಟಾಗಿ ಬಾಲಿವುಡ್ ಸಂಪರ್ಕ ಇಲ್ಲದಿದ್ದರೂ ಹೇಗೋ ಗೀತಾ ಅವರ ಬಗ್ಗೆ ವಿಚಾರಿಸಿ, ಕೊನೆಗೆ ಫೋನ್​ ನಂಬರ್ ಸಹ​ ಪಡೆದುಕೊಂಡರು.​ ಆರಂಭದಲ್ಲಿ ವೃತ್ತಿ ಜೀವನದಲ್ಲಿ ತುಂಬಾ ಬಿಜಿಯಾಗಿದ್ದ ಗೀತಾ, ಹರ್ಭಜನ್​ ಮೇಲೆ ಹೆಚ್ಚು ಗಮನ ಹರಿಸಿರಲಿಲ್ಲ. ಆದಾಗ್ಯೂ ಭಾರತ ಟಿ20 ವಿಶ್ವಕಪ್​ ಗೆದ್ದಂತಹ ಸಮಯದಲ್ಲಿ ಗೀತಾ ಅವರು ಹರ್ಭಜನ್​ ಅವರಿಗೆ ಶುಭ ಕೋರುವ ಮೂಲಕ ಗಮನ ಸೆಳೆದರು. ಬಳಿಕ ಇಬ್ಬರ ನಡುವೆ ಒಂದು ಸಣ್ಣ ಪರಿಚಯವಾಯಿತು. ಆರಂಭದಲ್ಲಿ ಇಬ್ಬರು ಕಾಫಿಗಾಗಿ ಪರಸ್ಪರ ಭೇಟಿಯಾದರು. ಬಳಿಕ ಇಬ್ಬರ ನಡುವಿನ ಸ್ನೇಹ ಗಾಢವಾಯಿತು. ಕೊನೆಯಲ್ಲಿ ಇಬ್ಬರ ನಡುವೆ ಪ್ರೀತಿಯು ಹುಟ್ಟಿಕೊಂಡಿತು.

ತಮ್ಮ ಸಂಬಂಧವನ್ನು ತುಂಬಾ ವಿವೇಚನೆಯಿಂದ ಗುಟ್ಟಾಗಿ ಇರಿಸಿಕೊಂಡಿದ್ದ ಇಬ್ಬರು 2015ರಲ್ಲಿ ಪಂಜಾಬಿ ಸಂಪ್ರದಾಯದಂತೆ ಮದುವೆ ಆಗುವ ಮೂಲಕ ಎಲ್ಲರಿಗೂ ಅಚ್ಚರಿ ಉಂಟು ಮಾಡಿದರು. ತುಂಬಾ ಸರಳವಾಗಿ ವಿವಾಹ ಮಾಡಿಕೊಂಡರು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ 2016ರ ಜುಲೈ ತಿಂಗಳಲ್ಲಿ ಹೀನಾ ಹೀರ್ ಪ್ಲಾಹಾ ಎಂಬ ಹೆಣ್ಣು ಮಗುವನ್ನು ದಂಪತಿ ಸ್ವಾಗತಿಸಿದರು. (ಏಜೆನ್ಸೀಸ್​)