More

    ರಾಮನ ದರ್ಶನಕ್ಕೆ ಅಯೋಧ್ಯೆಗೆ ಹೊರಟಿತೆ ಜಟಾಯು ಪಕ್ಷಿ? ಇಲ್ಲಿದೆ ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು

    ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮ ಮಂದಿರ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಅಸಂಖ್ಯಾತ ಹಿಂದುಗಳು ದಿನಗಣನೆ ಮಾಡುತ್ತಿದ್ದಾರೆ. ರಾಮಲಲ್ಲಾ ವಿಗ್ರಹ ಸ್ಥಾಪನೆಗೆ ಸಾಕ್ಷಿಯಾಗಲು ಸಹಸ್ರಾರು ಜನರು ಕಾಯುತ್ತಿದ್ದಾರೆ. ಇದರ ನಡುವೆ ರಾಮ ಮಂದಿರಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇವುಗಳಲ್ಲಿ ಕೆಲವು ನಕಲಿ ವಿಡಿಯೋಗಳು ಸಹ ಇವೆ.

    ರಾಮಾಯಣದಲ್ಲಿ ಉಲ್ಲೇಖವಾಗಿರುವ ಜಟಾಯು ಪಕ್ಷಿಗಳು ಅಯೋಧ್ಯೆ ಕಡೆ ಹೊರಟಿವೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಆದರೆ, ವಿಡಿಯೋ ಅಸಲಿಯತ್ತನ್ನು ಬೆನ್ನತ್ತಿದಾಗ ಇದು ಹಳೆಯ ವಿಡಿಯೋ ಎಂಬುದು ಬಯಲಾಗಿದೆ.

    ವೈರಲ್​ ವಿಡಿಯೋ ಏನು?
    ಶುಭಮ್​ ಹಿಂದು (@Shubhamhindu01) ಹೆಸರಿನ ಎಕ್ಸ್​ ಖಾತೆಯಲ್ಲಿ 2024, ಜನವರಿ 3ರಂದು ವಿಡಿಯೋವೊಂದು ಶೇರ್​ ಮಾಡಿಲಾಗಿದೆ. ರಸ್ತೆ ಪಕ್ಕದಲ್ಲಿ ಕೆಲವು ಜಟಾಯು ಪಕ್ಷಿಗಳು ಇರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜಟಾಯು ಪಕ್ಷಿ ಅಯೋಧ್ಯೆಗೆ ಆಗಮಿಸಲು ತನ್ನ ಪ್ರಯಾಣವನ್ನು ಆರಂಭಿಸಿದೆ ಎಂದು ಅಡಿಬರಹ ನೀಡಲಾಗಿದೆ. ಅಲ್ಲದೆ, ವಿಡಿಯೋ ಹಿನ್ನೆಲೆಯಲ್ಲಿ ಭಜನೆ ಸಹ ಕೇಳುತ್ತದೆ.

    Jatayu 1

    10 ಸೆಕೆಂಡ್​ ಉದ್ದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದುವರೆಗೂ 2.5 ಲೈಕ್ಸ್​ ಪಡೆದುಕೊಂಡಿದೆ.

    ವಿಡಿಯೋ ಅಸಲಿಯತ್ತೇನು?
    ವಿಡಿಯೋದ ಕೆಲವು ಕೀಫ್ರೇಮ್​ಗಳನ್ನು ತೆಗೆದುಕೊಂಡು ಗೂಗಲ್​ ರೀವರ್ಸ್​ ಸರ್ಚ್​ ಮಾಡಿದಾಗ Prairie ಹೆಸರಿನ ಫೇಸ್​ಬುಕ್​ ಪೇಜ್ ಲಿಂಕ್​ ಕಾಣಸಿಗುತ್ತದೆ. ಪೇಜ್​ ಓಪನ್​ ಮಾಡಿದಾಗ 2021ರ ಡಿಸೆಂಬರ್​ 11ರಲ್ಲಿ ಈ ವಿಡಿಯೋ ಪೋಸ್ಟ್​ ಆಗಿದೆ. ಅರೆಬಿಕ್​ ಭಾಷೆಯಲ್ಲಿ ಅಡಿಬರಹ ನೀಡಲಾಗಿದ್ದು, ಅದರ ಸಾರಾಂಶ ಹೀಗಿದೆ. ಹಿಮಾಲಯನ್ ಹದ್ದು… ಇದು ಓಲ್ಡ್ ವರ್ಲ್ಡ್ ಹದ್ದು, ಇದು ರಾಪ್ಟರ್ಸ್ ಮತ್ತು ಹಾಕ್ ಕುಟುಂಬಕ್ಕೆ ಸೇರಿದೆ. ಇದು ಯುರೋಪಿಯನ್ ಬೂದು ಬಣ್ಣದ ರಣಹದ್ದುಗಳ ಆನುವಂಶಿಕ ಸಂಬಂಧಿಯಾಗಿದೆ ಮತ್ತು ಇದನ್ನು ಒಮ್ಮೆ ಬೂದು ಬಣ್ಣದ ರಣಹದ್ದುಗಳ ಉಪಜಾತಿ ಎಂದು ವರ್ಗೀಕರಿಸಲಾಗಿದೆ. ಹಿಮಾಲಯದ ರಣಹದ್ದು ಹಿಮಾಲಯ ಮತ್ತು ಪಕ್ಕದ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಕಂಡುಬರುತ್ತದೆ ಮತ್ತು ಇದು ಓಲ್ಡ್ ವರ್ಲ್ಡ್ ರಣಹದ್ದುಗಳ ಎರಡು ದೊಡ್ಡ ಜಾತಿಗಳಲ್ಲಿ ಒಂದಾಗಿದೆ. ಹಿಮಾಲಯನ್ ಹದ್ದಿನ ಸರಾಸರಿ ತೂಕ 9 ಕೆಜಿ, ಆದರೆ ಹದ್ದು ಪರಿಸ್ಥಿತಿಗಳ ಆಧಾರದ ಮೇಲೆ 8 ರಿಂದ 12 ಕೆಜಿ ತೂಕದವರೆಗೂ ಇರುತ್ತವೆ. ಹಿಮಾಲಯದ ಹದ್ದಿನ ರೆಕ್ಕೆಗಳು 2.6 ಮೀ ಮತ್ತು 3.1 ಮೀ ನಡುವೆ ಇರುತ್ತದೆ ಎಂದು ಮಾಹಿತಿ ನೀಡಲಾಗಿದೆ.

    ಯೂಟ್ಯೂಬ್​ನಲ್ಲಿಯೂ ಇದೇ ರೀತಿಯ ವಿಡಿಯೋ ಅಪ್​ಲೋಡ್​ ಆಗಿದೆ. ವಿಡಿಯೋಗೆ ಬಲ್ಗೇರಿಯನ್ ಭಾಷೆಯಲ್ಲಿ ಶೀರ್ಷಿಕೆ ಬರೆಯಲಾಗಿದೆ. ಈ ವೀಡಿಯೊವನ್ನು 2021ರ ಡಿಸೆಂಬರ್​ 19ರಂದು ಅಪ್‌ಲೋಡ್ ಮಾಡಲಾಗಿದೆ. ಹೀಗಾಗಿ ವೈರಲ್ ವಿಡಿಯೋಗೂ ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ವಿಡಿಯೋ ಮೂರು ವರ್ಷಗಳ ಹಳೆಯದ್ದು ಎಂಬುದು ಮೂಲಗಳಿಂದ ಗೊತ್ತಾಗಿದೆ.

    ವಿಡಿಯೋದಲ್ಲಿ ಯಾವ ಹಕ್ಕಿ ಕಾಣಿಸಿಕೊಂಡಿದೆ ಎಂದು ಈಗ ನಾವು ಕಂಡುಕೊಂಡಿದ್ದೇವೆ. ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ ಈ ಹಕ್ಕಿ ಯುರೇಷಿಯನ್ ಗ್ರಿಫನ್ ವಲ್ಚರ್ ಮತ್ತು ಇದು ಭಾರತದ ಅತ್ಯಂತ ಅಪರೂಪದ ಜಾತಿಯಾಗಿದೆ ಎಂದು ಕಂಡುಬಂದಿದೆ. ಹಾಗಾಗಿ ವಿಡಿಯೋದಲ್ಲಿ ಕಾಣುವ ಹಕ್ಕಿ ಜಟಾಯು ಅಲ್ಲ ಎಂಬುದು ಕೂಡ ಸ್ಪಷ್ಟವಾಗಿದೆ. (ಏಜೆನ್ಸೀಸ್​)

    ಚಿನ್ನ ಲೇಪಿತ ಪಾದರಕ್ಷೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ಭಕ್ತ: ಪಾದುಕೆಗಳ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts