ಗಾಂಧಿನಗರ: ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಸೂಕ್ತ ಪ್ರೋತ್ಸಾಹ ಸಿಗಬೇಕು ಎಂಬ ಮಾತುಗಳು ಆಗಾಗ ಕೇಳಿಬರುತ್ತಿರುತ್ತವೆ. ಇದಕ್ಕೆ ಕ್ರಿಕೆಟ್ ಜಗತ್ತೂ ಹೊರತಲ್ಲ. 19 ವರ್ಷದೊಳಗಿನವರ ಟೂರ್ನಿಯಲ್ಲಿ(Cricket U-19) 18ರ ಹರಯದ ದ್ರೋಣ ದೇಸಾಯಿ ಅದ್ಭುತ ಇನ್ನಿಂಗ್ಸ್ ಸಿಡಿಸಿದ್ದಾನೆ. ಗುಜರಾತ್ನ ಗಾಂಧಿನಗರದಲ್ಲಿ ನಡೆದ ದಿವಾನ್ ಬಲ್ಲುಭಾಯ್ ಕಪ್ ಅಂಡರ್-19 ಟೂರ್ನಿಯಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 498 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾನೆ.
ಇದನ್ನೂ ಓದಿ: Suspected of Theft: ಅಪ್ರಾಪ್ತ ಸಹೋದರರನ್ನು ವಿವಸ್ತ್ರಗೊಳಿಸಿ, ಸರಪಣಳಿಗಳಿಂದ ಕಟ್ಟಿಹಾಕಿ ಥಳಿಸಿದ ಬಳಿಕ ಮೆರವಣಿಗೆ..ಏನಾಯ್ತು?
ದ್ರೋಣ ದೇಸಾಯಿ ಅವರು ಅಂತರ ಶಾಲಾ ಕ್ರಿಕೆಟ್ ಪಂದ್ಯದಲ್ಲಿ ಐತಿಹಾಸಿಕ 498 ರನ್ ಸಿಡಿಸಿದ್ದು, ಗುಜರಾತ್‌ನಲ್ಲಿ ಅತಿ ಹೆಚ್ಚು ಸ್ಕೋರರ್ ಮತ್ತು ಭಾರತದಲ್ಲಿ ಜಂಟಿ ಮೂರನೇ ಅತಿ ಹೆಚ್ಚು ಸ್ಕೋರರ್ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.
ಗಾಂಧಿನಗರ ಸೇಂಟ್ ಕ್ಸೇವಿಯರ್ಸ್ (ಲೊಯೊಲಾ) ಶಾಲೆಗಾಗಿ ಆಡುತ್ತಿರುವ ದ್ರೋಣ ಶಿವಾಯ್ ಕ್ರಿಕೆಟ್ ಮೈದಾನದಲ್ಲಿ ಜೆಎಲ್ ಇಂಗ್ಲಿಷ್ ಶಾಲೆಯ ವಿರುದ್ಧ ಈ ಮ್ಯಾರಥಾನ್ ಇನ್ನಿಂಗ್ಸ್‌ನೊಂದಿಗೆ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾನೆ.
ದ್ರೋಣ 320 ಎಸೆತಗಳ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಸೇರಿದಂತೆ 86 ಬೌಂಡರಿ ಬಂದಿರುವುದು ಗಮನಾರ್ಹ ಸಂಗತಿಯಾಗಿದೆ. ಆತನ ಇನ್ನಿಂಗ್ಸ್ ನೆರವಿನಿಂದ ಸೇಂಟ್ ಕ್ಸೇವಿಯರ್ಸ್ 712 ರನ್ ಗಳ ಜಯ ಸಾಧಿಸಿತು.
ಇನ್ನಿಂಗ್ಸ್‌ನಲ್ಲಿ 498 ರನ್ ಗಳಿಸಿದ ನಂತರ, ದ್ರೋಣ ಇದೀಗ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾನೆ. ಇನ್ನು ಐವರು ಬ್ಯಾಟ್ಸ್‌ಮನ್‌ಗಳು ಮಾತ್ರ ದ್ರೋಣನಿಗಿಂತ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. ಇದೀಗ ದ್ರೋಣ ಆರನೇ ಆಟಗಾರನಾಗಿ ಸ್ಥಾನ ಪಡೆದುಕೊಂಡಿದ್ದಾನೆ.
ಈ ಹಿಂದೆ ಮುಂಬೈನ ಪ್ರಣವ್ ಧನವಾಡೆ 1009 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದು ಇನ್ನೂ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರ್ ಆಗಿದೆ. ನಂತರ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ (546), ಡಾ. ಹವೇವಾಲಾ (515), ಚಮನ್‌ಲಾಲ್ (ಔಟಾಗದೆ 506) ಮತ್ತು ಅರ್ಮಾನ್ ಜಾಫರ್ (498) ರನ್ ಗಳಿಸಿದ್ದಾರೆ.
"ನಾನು 500 ರನ್‌ಗಳ ಸಮೀಪದಲ್ಲಿದ್ದೆನೆಂದು ನನಗೆ ತಿಳಿದಿರಲಿಲ್ಲ. ಅಂಕಪಟ್ಟಿ ಇಲ್ಲ. ನನ್ನ ತಂಡದ ಯಾವೊಬ್ಬ ಸದಸ್ಯರೂ ಈ ಬಗ್ಗೆ ನನಗೆ ಹೇಳಿಲ್ಲ. ನಾನು ನನ್ನ ಸ್ಟ್ರೋಕ್ ಆಡಲು ಹೋಗಿ ಹೊರಬಂದೆ. ಆದರೆ ಇಷ್ಟು ಮೌಲ್ಯಯುತ ರನ್ ಗಳಿಸಿದ್ದಕ್ಕೆ ಖುಷಿಯಾಗುತ್ತಿದೆ’ ಎಂಬುದು ದ್ರೋಣ ಅಭಿಪ್ರಾಯವಾಗಿದೆ. ಗುಜರಾತ್ ಅಂಡರ್-14 ತಂಡದಲ್ಲಿ ಆಡಿದ್ದ ದ್ರೋಣ ಇದೀಗ ಅಂಡರ್-19(Cricket U-19) ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾನೆ.