GT vs CSK: ಇಂದು (ಮೇ.25) ಅಹಮದಾಬಾದ್ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಿಟಿ ಮತ್ತು ಸಿಎಸ್ಕೆ ನಡುವಿನ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಪಡೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇದನ್ನೂ ಓದಿ: ತನ್ನದೇ ಕುಟುಂಬವನ್ನು ಸರ್ವನಾಶ ಮಾಡಿದ ಅಫಾನ್ ಸಾಯುವ ನಿರ್ಧಾರ! ಜೈಲಿನೊಳಗೆ ಆತ್ಮಹತ್ಯೆಗೆ ಯತ್ನ | Venjaramoodu Case
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಪಡೆಗೆ ಆರಂಭಿಕರಾದ ಆಯುಷ್ ಮಾತ್ರೆ, ಡೆವಾನ್ ಕಾನ್ವೆ ಸ್ಫೋಟಕ ಓಪನಿಂಗ್ ನೀಡಿದರು. ತದನಂತರ ಕ್ರೀಸ್ಗೆ ಬಂದ ಊರ್ವಿ ಪಟೇಲ್, ಶಿವಂ ದುಬೆ ಉತ್ತಮ ಪ್ರದರ್ಶನ ನೀಡದೆ ಶೀಘ್ರವೇ ಪೆವಿಲಿಯನ್ ಹಾದಿ ಹಿಡಿದರು. ಈ ಸಮಯದಲ್ಲಿ ತಂಡಕ್ಕೆ ಆಸರೆಯಾಗಿದ್ದು ಡೆವಾಲ್ಡ್ ಬ್ರೆವಿಸ್ ಮತ್ತು ರವೀಂದ್ರ ಜಡೇಜಾ ಅವರ ಅಬ್ಬರದ ಬ್ಯಾಟಿಂಗ್.
ಜಡೇಜಾ ಮತ್ತು ಬ್ರೆವಿಸ್ ಜತೆಯಾಟ ಸಿಎಸ್ಕೆ ಒಟ್ಟು ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿತು. ಸ್ಫೋಟಕ ಇನ್ನಿಂಗ್ಸ್ ಕೊಡುಗೆ ನೀಡುವುದರೊಂದಿಗೆ ಆಕರ್ಷಕ ಅರ್ಧಶತಕ ಸಿಡಿಸಿದ ಬ್ರೆವಿಸ್, ಸಿಎಸ್ಕೆ ತಂಡಕ್ಕೆ ಗೆಲುವಿನ ಭರವಸೆ ಹಂಚಿದ್ದಾರೆ. 231 ರನ್ಗಳ ಬೃಹತ್ ಗುರಿಯನ್ನು ಜಿಟಿ ತಲುಪಲಿದೆಯೇ ಅಥವಾ ಸೋತು ಶರಣಾಗಲಿದೆಯಾ ಎಂಬುದನ್ನು ಎರಡನೇ ಇನ್ನಿಂಗ್ಸ್ನಲ್ಲಿ ಕಾದು ನೋಡಬೇಕಿದೆ.