ಮೆಲ್ಬೋರ್ನ್: ಆಸ್ಟ್ರೆಲಿಯಾ ಮತ್ತು ಆರ್ಸಿಬಿ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಭಾರತ ಮೂಲದ ವಿನಿ ರಾಮನ್ ಜತೆಗೆ ವಿವಾಹವಾಗಿರುವುದು ಈಗಾಗಲೆ ಕ್ರಿಕೆಟ್ ಪ್ರೇಮಿಗಳಿಗೆ ತಿಳಿದೇ ಇದೆ. 2022ರಲ್ಲಿ ವಿನಿ ರಾಮನ್ ಅವರನ್ನು ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹವಾಗುವ ಮೂಲಕ ಮ್ಯಾಕ್ಸ್ವೆಲ್ ಭಾರತೀಯರ ಗಮನಸೆಳೆದಿದ್ದರು. ಇದೀಗ ದಂಪತಿ ಮೊದಲ ಮಗುವಿನ ನಿರೀೆಯಲ್ಲಿದ್ದು, ಹಿಂದು ಸಂಪ್ರದಾಯದಂತೆ ನಡೆದ ವಿನಿ ರಾಮನ್ ಅವರ ಸೀಮಂತ ಕಾರ್ಯಕ್ರಮ ಗಮನಸೆಳೆದಿದೆ.
ತಮಿಳು ಸಂಸತಿಯ ಅನ್ವಯ ನಡೆದ ಸೀಮಂತ ಕಾರ್ಯಕ್ರಮದ ಚಿತ್ರಗಳನ್ನು ವಿನಿ ರಾಮನ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಸೀರೆಯಲ್ಲಿ ವಿನಿ ರಾಮನ್ ಕಂಗೊಳಿಸಿದ್ದು, ಪತಿ ಮ್ಯಾಕ್ಸ್ವೆಲ್ ಕೂಡ ತುಂಬು ಗರ್ಭಿಣಿ ಪತ್ನಿ ಜತೆಗೆ ಪೋಸ್ ನೀಡಿ ಸಂಭ್ರಮಿಸಿದ್ದಾರೆ.
ಮ್ಯಾಕ್ಸ್ವೆಲ್ ಅಪ್ಪನಾಗುತ್ತಿರುವ ವಿಷಯವನ್ನು ವಿನಿ ರಾಮನ್ ಕಳೆದ ಐಪಿಎಲ್ 16ನೇ ಆವೃತ್ತಿಯ ಸಮಯದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಅಲ್ಲದೆ ಸೆಪ್ಟೆಂಬರ್ ತಿಂಗಳಲ್ಲಿ ಮಗುವಿನ ಆಗಮನದ ನಿರೀೆಯಲ್ಲಿರುವುದಾಗಿಯೂ ತಿಳಿಸಿದ್ದರು. ತನಗೆ ಈ ಹಿಂದೆ ಕೆಲಬಾರಿ ಗರ್ಭಪಾತವಾಗಿದ್ದನ್ನೂ ಬಹಿರಂಗಪಡಿಸಿದ್ದ ವಿನಿ, ತಾಯಿಯಾಗುತ್ತಿರುವ ಬಗ್ಗೆ ಸಂಭ್ರಮ ಹಂಚಿಕೊಂಡಿದ್ದರು.