Virat Kohli: ಆಸ್ಟ್ರೇಲಿಯಾ ಅಂಗಳದಲ್ಲಿ ಟೀಮ್ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯವನ್ನು ಹೀನಾಯವಾಗಿ ಸೋತ ಬೆನ್ನಲ್ಲೇ ಬಿಸಿಸಿಐ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಯಿತು. ಆಟಗಾರರ ಜೊತೆ ಕುಟುಂಬಸ್ಥರು ಹೆಚ್ಚು ದಿನಗಳ ಕಾಲ ಉಳಿದುಕೊಳ್ಳುವುದು ಅವರ ಗಮನವನ್ನು ಆಟದಿಂದ ಕಸಿದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಬಿಸಿಸಿಐ ಪರಿಗಣಿಸಿದ್ದು, ಈ ಹಿನ್ನಲೆ ಹೊಸ ನಿಯಮವನ್ನು ಜಾರಿಗೊಳಿಸಿತು. ಇದು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, 'ರನ್ ಮಷಿನ್' ವಿರಾಟ್ ಕೊಹ್ಲಿ ಅವರ ಮುನಿಸಿಗೆ ಕಾರಣವಾಯಿತು. ಕೊಹ್ಲಿಯ ಟೀಕೆಗೆ ಇದೀಗ ಹೆಡ್ ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: 2ನೇ ದಿನದ ಟೆಸ್ಟ್ ಬೆನ್ನಲ್ಲೇ ಇಂಗ್ಲೆಂಡ್ಗೆ ಬಿಗ್ ಶಾಕ್! ಸ್ಟಾರ್ ಆಟಗಾರ ಕಣಕ್ಕಿಳಿಯುವುದು ಬಹುತೇಕ ಡೌಟ್ | IND vs ENG
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ 1-3 ಅಂತರದಲ್ಲಿ ಸೋಲುಂಡ ಹಿನ್ನಲೆ ಈ ನಿಯಮವನ್ನು ಜಾರಿಗೊಳಿಸಲಾಯಿತು. 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪಂದ್ಯಾವಳಿಗಳಿಗೆ ಆಟಗಾರರ ಕುಟುಂಬಗಳ ವಾಸ್ತವ್ಯವನ್ನು 14 ದಿನಗಳಿಗೆ ಮತ್ತು ಕಡಿಮೆ ಅವಧಿಯ ಪ್ರವಾಸಗಳಿಗೆ ಕೇವಲ ಒಂದು ವಾರದವರೆಗೆ ಸೀಮಿತಗೊಳಿಸಲಾಗಿದೆ. ಬಿಸಿಸಿಐ ಹೊಸ ನಿಯಮವನ್ನು ಖಂಡಿಸಿದ ಕಿಂಗ್ ಕೊಹ್ಲಿ, ಒಳಗೆ ಕುಟುಂಬವಿಲ್ಲದೆ ಬೇಸರದಿಂದ ಕೂರುವುದು ನನಗಿಷ್ಟವಿಲ್ಲ ಎಂದು ಹೇಳಿದ್ದರು. ಕೊಹ್ಲಿಯ ಈ ಮಾತಿಗೆ ಗರಂ ಆದ ಗೌತಿ, ಕಡೆಗೂ ಮಾಜಿ ನಾಯಕನಿಗೆ ತಿರುಗೇಟು ನೀಡಿದ್ದಾರೆ.
ಕ್ರಿಕೆಟಿಗ ಚೇತೇಶ್ವರ್ ಪೂಜಾರ ಅವರೊಂದಿಗಿನ ಸಂಭಾಷಣೆ ವೇಳೆ ಇದಕ್ಕೆ ಪ್ರತಿಕ್ರಿಯಿಸಿದ ಗಂಭೀರ್, "ಕುಟುಂಬಗಳು ಮುಖ್ಯ ಅದರಲ್ಲಿ ಎರಡನೇ ಮಾತಿಲ್ಲ. ಆದರೆ, ನಿಮಗೆ ಒಂದಂತು ಗೊತ್ತಿರಲಿ, ನೀವಿಲ್ಲಿಗೆ ಬಂದಿರುವುದು ಒಂದು ಮಹತ್ವದ ಗುರಿ ಮತ್ತು ಉದ್ದೇಶದಲ್ಲಿ. ಅದು ಅತೀ ಮುಖ್ಯ. ಇದ್ಯಾವುದು ರಜೆಯಲ್ಲ. ನಿಮಗೆ ಒಂದಷ್ಟು ಜನರು ಡ್ರೆಸ್ಸಿಂಗ್ ರೂಮ್ನಲ್ಲಿ ಸಿಕ್ತಾರೆ. ಅದನ್ನು ಹೊರತುಪಡಿಸಿ ದೇಶವನ್ನು ಪ್ರತಿನಿಧಿಸಲು ಬಂದಿರುವ ನಿಮಗೆ ದೊಡ್ಡ ಜವಾಬ್ದಾರಿ ಇರುತ್ತದೆ. ಭಾರತೀಯರನ್ನು ಹೆಮ್ಮೆ ಪಡಿಸುವ ಪ್ರಮುಖ ಗುರಿ ನಿಮ್ಮದಾಗಿರುತ್ತದೆ" ಎಂದಿದ್ದಾರೆ,(ಏಜೆನ್ಸೀಸ್).