ಕ್ರೀಡೆ

ದ್ರಾವಿಡ್​ಗೆ ಹೋಲಿಸಿದರೆ ಗೌತಮ್ ಗಂಭೀರ್ ನೇತೃತ್ವದ ಕೋಚಿಂಗ್ ಸ್ಟಾಫ್​ ವಿಭಿನ್ನ; ರೋಹಿತ್ ಶರ್ಮಾ

ಚೆನ್ನೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಶೈಲಿಯು ಅವರ ಹಿಂದಿನ ಕೋಚ್​ ರಾಹುಲ್ ದ್ರಾವಿಡ್‌ ಅವರಗಿಂತ ಭಿನ್ನವಾಗಿದೆ. ಆದರೆ, ಹೊಸ ತರಬೇತಿ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಬುಧವಾರದಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ರೋಹಿತ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಖಂಡಿತವಾಗಿ ರಾಹುಲ್ ಭಾಯ್, ವಿಕ್ರಮ್ ರಾಥೋಡ್ ಮತ್ತು ಪರಾಸ್ ಮಾಂಬ್ರೆ ತಂಡವು ವಿಭಿನ್ನ ತಂಡವಾಗಿದೆ. ಹೊಸ ತರಬೇತಿ ತಂಡವು ಭಿನ್ನ ದೃಷ್ಟಿಕೋನವನ್ನು ತರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

"ಹೊಸ ತರಬೇತಿ ತಂಡವು ವಿಭಿನ್ನ ಶೈಲಿಯನ್ನು ಹೊಂದಿದೆ. ಆದರೆ ಅದಯ ಸಮಸ್ಯೆಯಲ್ಲ. ಪರಸ್ಪರ ಮಾಡಿಕೊಳ್ಳುವು ಮುಖ್ಯವಾಗುತ್ತದೆ. ಗೌತಮ್ ಗಂಭೀರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ. ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ಜುಲೈನಲ್ಲಿ ಗೌತಮ್ ಗಂಭೀರ್ ಅಧಿಕಾರಿ ವಹಿಸಿಕೊಂಡರು. ಅವರ ಅಧಿಕಾರ ಆರಂಭವಾಗ ಬಳಿಕ ಭಾರತ ತಂಡ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ.

ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಮೂರನೇ ಆವೃತ್ತಿಯಲ್ಲೂ ಫೈನಲ್‌ ತಲುಪುವ ಲೆಕ್ಕಾಚಾರ ಹಾಕಿಕೊಂಡಿರುವ ಟೀಮ್ ಇಂಡಿಯಾ, ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಟೆಸ್ಟ್ ಪಂದ್ಯ ಆಡಲಿದೆ. ಸರಣಿಯ ಮೊದಲ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೆ. 19ರಂದು, ಎರಡನೇ ಟೆಸ್ಟ್ ಪಂದ್ಯ ಸೆ.27 ರಂದು ಎರಡನೇ ಟೆಸ್ಟ್‌ ಪಂದ್ಯ ನಡೆಯಲಿದೆ.