ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಪಂದ್ಯದ ನಡುವೆ ನಡೆದ ಲವ್ ಪ್ರಪೋಸಲ್
ಫಿಫಾ: ಸದ್ಯ ಕ್ರೀಡಾ ಜಗತ್ತಿನಲ್ಲಿ ಫಿಫಾ ವಿಶ್ವಕಪ್ ಸದ್ದು ಎಲ್ಲಡೆ ಕೇಳಿ ಬರುತ್ತಿದೆ. ಆರಂಭದಲ್ಲಿ ಕೆಲ ವಿವಾದಗಳ ಮೂಲಕ ಸದ್ದು ಮಾಡಿದ್ದ ಟೂರ್ನಿ ಈಗ ಲವ್ ಪ್ರಪೋಸಲ್ (Love Proposal in FIFA) ಮೂಲಕ ಸಾಕಷ್ಟು ವೈರಲ್ ಆಗುತ್ತಿದೆ.
ಶುಕ್ರವಾರ (ಜೂ.26) ರಂದು ನಡೆದ ಟುನೀಶಿಯಾ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಪ್ರಪೋಸ್ ಮಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಯುವತಿಯೊಬ್ಬಳು ತನ್ನ ಹುಡುಗನಿಗೆ ಚುಂಬಿಸಿ ನಂತರ ಮಂಡಿಯೂರಿ ಪ್ರೇಮ ಪ್ರಸ್ಥಾವನೆ ಮಾಡಿದ್ದಾಳೆ. ಆಕೆಯ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡ ಆ ಯುವಕ ತನ್ನ ಬೆರಳಿಗೆ ಉಂಗುರವನ್ನು ಹಾಕಿಕೊಂಡು, ಆಕೆಯನ್ನು ತಬ್ಬಿಕೊಂಡಿದ್ದಾನೆ.
ಮ್ಯಾಚ್ ನಡುವೆ ಈ ವಿನೂತನ ದೃಶ್ಯವನ್ನು ನೋಡಿದ ಪ್ರೇಕ್ಷಕರು ಫುಟ್ಭಾಲ್ ಪಂದ್ಯ ನೋಡುವುದನ್ನು ಬಿಟ್ಟು ಈ ಲವ್ ಪ್ರಪೋಸಲ್ನ್ನು ನೋಡಿದ್ದು, ಜೋರಾಗಿ ಚೀರಿ ತಮ್ಮ ಸಂತೋಷವನ್ನು ಹೊರಹಾಕಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವೀಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕಮೆಂಟ್ ಬಾಕ್ಸ್ ತುಂಬಿಸಿದ್ದಾರೆ. ಇದು ನಾನು ಕೇವಲ ನಮ್ಮ ಐಪಿಎಲ್ನಲ್ಲಿ ಮಾತ್ರ ನಡೆಯುತ್ತೆ ಎಂದು ತಿಳಿದಿದ್ದೆ. ಇದು ಜಗತ್ತಿನಾದ್ಯಂತ ನಡೆಯುತ್ತೆ ಎಂದು ಇಂದು ತಿಳಿಯಿತು ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ಈ ಬಾರಿಯ ಫಿಫಾನಲ್ಲಿ ಮ್ಯಾಚ್ ನೋಡಿದ್ದಕ್ಕಿಂತ ಜಗಳ, ಲವ್ ಪ್ರಪೋಸಲ್ಗಳನ್ನು ನೋಡಿದ್ದೆ ಹೆಚ್ಚಾಯಿತು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಪಾಪ ಮ್ಯಾಚ್ ನೋಡಲು ಬಂದವರು ಇವರ ಲವ್ ಪ್ರಪೋಸಲ್ ನೋಡಿ ಹೋಗುವಂತಾಯಿತು ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜನ್ಸೀಸ್).