ಫಿಫಾದಲ್ಲಿ ಪಾಕ್ ನಿರ್ಮಿತ ಫುಟ್ಬಾಲ್ ಬಳಕೆ
- 2026ರ ಫಿಫಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ನಿರ್ಮಿತ ಫುಟ್‌ಬಾಲ್ ಬಳಕೆಯಾಗುತ್ತಿದೆಯೇ?
- ಪ್ರಧಾನಿ ಶಹಬಾಜ್ ಶರೀಫ್ ಅವರ ವೈರಲ್ ಟ್ವೀಟ್‌ನ ಅಸಲಿ ಸತ್ಯವೇನು?
- ವಿಶ್ವಕಪ್‌ನ ಅಧಿಕೃತ 'ಟ್ರಿಯೋಂಡಾ' ಚೆಂಡು ಮತ್ತು ಪಾಕಿಸ್ತಾನದ ಸಿಲಾಕೋಟ್ ನಡುವೆ ಏನೀ ಸಂಬಂಧ
ಫ್ಯಾಕ್ಟ್ಚೆಕ್: ಕ್ರಿಕೆಟ್ಗೆ ಹೇಗೆ ಐಪಿಎಲ್ ಬ್ರ್ಯಾಂಡ್ ಅಂಬಾಸಿಡರ್, ಹಾಗೆಯೇ ಫುಟ್ಬಾಲ್ಗೆ ಫಿಫಾ ವಿಶ್ವಕಪ್ ಮುಕುಟಪ್ರಾಯವಾಗಿದೆ. 2026 ರ ಫಿಫಾ ವಿಶ್ವಕಪ್ ಈದೀಗ ಪ್ರಾರಂಭವಾಗಿದ್ದು, ಪ್ರಪಂಚದಾದ್ಯಂತ ಅಪಾರ ಪ್ರೇಕ್ಷಕರನ್ನು ಹೊಂದಿರುವ ಈ ಟೂರ್ನಿ ಶುಭಾರಂಭ ಮಾಡಿದೆ.
ಆದರೆ ಫಿಫಾ ವಿಶ್ವಕಪ್ ಪ್ರಾರಂಭದ ಬೆನ್ನಲ್ಲೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್, ಫಿಫಾ ವಿಶ್ವಕಪ್‌ನಲ್ಲಿ ಪಾಕಿಸ್ತಾನದಲ್ಲಿ ತಯಾರಾದ (FIFA Ball Made in Pakistan) ಚೆಂಡನ್ನು ಬಳಸುತ್ತಿರುವುದು ನಮಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ ಎಂದು ಟ್ವಿಟ್ ಮಾಡಿದ್ದರು.
ಈಗ ಈ ಟ್ವಿಟ್ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಫಿಫಾದಲ್ಲಿ ಬಳಕೆಯಾಗುತ್ತಿರುವ ಫುಟ್ಬಾಲ್ ನಿಜಕ್ಕೂ ಪಾಕಿಸ್ತಾನದಲ್ಲಿ ತಯಾರಾಗುತ್ತಾ ಎಂದು ಪ್ರೇಕ್ಷಕರು ಕೇಳುತ್ತಿದ್ದಾರೆ.
ಫಿಫಾದಲ್ಲಿ ಪಾಕ್ ಬಾಲ್? ಏನಿದರ ರಹಸ್ಯ?
ಫಿಫಾ ವಿಶ್ವಕಪ್ 2026 ರಲ್ಲಿ ಬಳಕೆಯಾಗುತ್ತಿರುವ ಅಧಿಕೃತ ಚೆಂಡನ್ನು ಟ್ರಿಯೋಂಡಾ ಎಂದು ಕರೆಯಲಾಗುತ್ತಿದೆ. ಟ್ರಿಯೋಂಡಾ ಎಂದರೆ ಈ ಭಾರಿ ಫಿಫಾ ವಿಶ್ವಕಪ್ನ್ನು ಆಯೋಜಿಸುತ್ತಿರುವ ದೇಶ( ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ)ಗಳ ಸಂಗಮ ಎಂಬರ್ಥದಲ್ಲಿ ವಿನ್ಯಾಸ ಮಾಡಲಾಗಿದೆ.
ಈ ಟ್ರಿಯೋಂಡಾ ಚೆಂಡನ್ನು ಪಾಕಿಸ್ತಾನದ ಸಿಲಾಕೋಟ್ನಲ್ಲಿ ತಯಾರು ಮಾಡಲಾಗುತ್ತಿದೆ ಮತ್ತು ಪಾಕಿಸ್ತಾನದಲ್ಲಿ ತಯಾರಾಗುವ ಚೆಂಡಗಳನ್ನು 1982 ರಿಂದ ನಡೆಯುವ ಎಲ್ಲಾ ಫಿಫಾ ವಿಶ್ವಕಪ್ಗಳಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದಲ್ಲಿರುವ ಸಿಲಾಕೋಟ್, ಜಾಗತಿಕ ಫುಟ್ಬಾಲ್ ತಯಾರಿಕೆಯಲ್ಲಿ ಭಾರಿ ಖ್ಯಾತಿಯನ್ನು ಗಳಸಿದೆ. ಇಲ್ಲಿ ತಯಾರಾಗುವ ಹೆಚ್ಚಿನ ಚೆಂಡುಗಳನ್ನು ವಿದೇಶಗಳಲ್ಲಿ ನಡೆಯುವ ಫುಟ್ಬಾಲ್ ಟೂರ್ನಿಗಳಲ್ಲಿ ಬಳಸಲಾಗುತ್ತದೆ.
ಸ್ವಾತಂತ್ರಪೂರ್ವ ಕಾಲದಿಂದ ಸಿಲಾಕೋಟ್ನಲ್ಲಿ ಫುಟ್ಬಾಲ್ ತಯಾರಿಕೆ ನಡೆಯುತ್ತಿದ್ದು, ಇಲ್ಲಿ ಹೆಚ್ಚಾಗಿ ಚೆಂಡುಗಳನ್ನು ಕೈಯಿಂದ ತಯಾರಿಸುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಪಡೆದಿದೆ ಎಂದು ಹೇಳಲಾಗುತ್ತದೆ. ಹೀಗೆ ಫಿಫಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸದಿದ್ದರೂ ಸಹ ಅಲ್ಲಿ ತಯಾರಾದ ಚೆಂಡು ಮೈದಾನಲ್ಲಿ ಮೋಡಿ ಮಾಡುತ್ತಿದೆ ಎಂದರೆ ತಪ್ಪಾಗದು, (ಏಜನ್ಸೀಸ್).