ಇನ್ನೂ ತಾನು ಕ್ರೀಡಾಂಗಣದ ಒಳಗೆ ಹೋಗುವುದಾಗಿ, ಕಬ್ಜ ಷರಣು ಎಂಬ ಯುವಕ ಸೋಷಿಯಲ್ ಮೀಡಿಯಾದಲ್ಲಿ ತನ್ನ ಸ್ನೇಹಿತನೊಂದಿಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದ.
ಬೆಂಗಳೂರು: ಐಪಿಎಲ್ ಪಂದ್ಯದ ವೇಳೆ ಭದ್ರತೆಯನ್ನು ದಾಟಿ ಮೈದಾನಕ್ಕೆ ನುಗ್ಗುತ್ತೀನಿ ಎಂದು ಚಾಲೆಂಜ್ ಮಾಡಿದ್ದ ಇಬ್ಬರು ಯುವಕರಿಗೆ ಬೆಂಗಳೂರು ನಗರ ಪೊಲೀಸರು ಚಳಿ ಬಿಡಿಸಿ, ಎಫ್ಐಆರ್ ದಾಖಲು ಮಾಡಿದ್ದಾರೆ.
ನಾವು ಇವತ್ತು ಚಾಲೆಂಜ್ ತೆಗೆದುಕೊಳ್ತಾ ಇದ್ದೀವಿ, ಈ ಚಾಲೆಂಜ್ ತೆಗೆದುಕೊಳ್ಳೋಕೆ ಧಮ್ ಇರ್ಬೇಕು, ಇದನ್ನು ಕಂಪ್ಲೀಟ್ ಮಾಡೋಕೆ ಹತ್ತು ಗುಂಡಿಗೆ ಇರ್ಬೇಕು, ಇದು ಒಂದು ಕನಸು, ಇದು ಒಂದು ಹೆಮ್ಮೆ, ಇದು ಒಂದು ಇತಿಹಾಸ, ಇದು ಒಂದು ಮೈಲಿಗಲ್ಲು, ನಾನು ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ ಹಾಗೂ ಕೆಕೆಆರ್ ತಂಡದಲ್ಲಿ ನಾನು ಓಡಿಹೋಗಿ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಳ್ತೇನೆ ಎಂದು ಬಹಳ ಹುಮ್ಮಸ್ಸಿನಿಂದ ವಿಡಿಯೋ ಮಾಡಿದ್ದರು.
ಕೊನೆಗೆ ಆ ಯುವಕರು ನಮ್ಮಿಂದ ತಪ್ಪಾಗಿದೆ, ಇನ್ನುಮುಂದೆ ಈ ತಪ್ಪನ್ನು ಮಾಡುವುದಿಲ್ಲ ಎಂದು ಕ್ಷಮೆ ಕೇಳಿಕೊಂಡಿದ್ದಾರೆ.
ಇನ್ನೂ ಆ ಇಬ್ಬರು ಯುವಕರ ವಿಡಿಯೋವನ್ನು ನೋಡಿದ ಬೆಂಗಳೂರು ನಗರ ಪೊಲೀಸರು, ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಆ ಹುಡುಗರಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.