Shubman Gill : ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭಮಾನ್ ಗಿಲ್ ಇಂಗ್ಲೆಂಡ್ ಬೌಲರ್‌ಗಳನ್ನು ಬೆಂಡತ್ತಿದ್ದನ್ನು ನೀವೆಲ್ಲರೂ ನೋಡಿರುತ್ತೀರಿ. ಗಿಲ್ ಬಾರಿಸಿದ ಅದ್ಭುತ ದ್ವಿಶತಕ (269) ಎರಡನೇ ಟೆಸ್ಟ್‌ನಲ್ಲಿ ಭಾರತವು ಬೃಹತ್ ಸ್ಕೋರ್ ಕಲೆಹಾಕಲು ಸಹಾಯ ಮಾಡಿತು.
ಈ ಪಂದ್ಯದಲ್ಲಿ ಶುಭಮಾನ್ ಗಿಲ್ 387 ಎಸೆತಗಳನ್ನು ಎದುರಿಸಿ, 30 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 269 ರನ್ ಗಳಿಸಿದರು. ಇದು ಟೆಸ್ಟ್‌ನಲ್ಲಿ ಅವರ ಮೊದಲ ದ್ವಿಶತಕ ಸಾಧನೆ. ಈ ಮೂಲಕ ಗಿಲ್ ಹಲವಾರು ದಾಖಲೆಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಭಾರತೀಯ ಮತ್ತು ಏಷ್ಯನ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಲ್ಲಿಯವರೆಗೆ, ಇಂಗ್ಲೆಂಡ್‌ನಲ್ಲಿ ಏಷ್ಯನ್ ನಾಯಕನೊಬ್ಬ ಗಳಿಸಿದ ಅತ್ಯಧಿಕ ಸ್ಕೋರ್ 2011ರಲ್ಲಿ ಲಾರ್ಡ್ಸ್‌ನಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಶಾನ್ ಗಳಿಸಿದ 193 ರನ್‌ಗಳಾಗಿತ್ತು.
ಮನ್ಸೂರ್ ಅಲಿ ಖಾನ್ ಪಟೌಡಿ, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ದ್ವಿಶತಕ ಗಳಿಸಿದ ಏಕೈಕ ಭಾರತೀಯ ನಾಯಕರಾಗಿ ಶುಭಮಾನ್ ಗಿಲ್ ಸೇರಿಕೊಂಡಿದ್ದಾರೆ. ಗಿಲ್ ಅವರ ದ್ವಿಶತಕವನ್ನು ಅಭಿಮಾನಿಗಳು ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ಸಂಭ್ರಮಿಸಿದ್ದಾರೆ. ಅಲ್ಲದೆ, ದಿಗ್ಗಜ ಆಟಗಾರರು ಕೂಡ ಗಿಲ್ರನ್ನು ಕೊಂಡಾಡಿದರು. ಇದರ ನಡುವೆ ಬಿಸಿಸಿಐ, ಗಿಲ್ ಅವರಿಗೆ ಸಂಬಂಧಿಸಿದ ವಿಡಿಯೋವೊಂದನ್ನು ಹಂಚಿಕೊಂಡಿದೆ.
269 ರನ್ ಬಾರಿಸಿದ ಬಳಿಕ ಗಿಲ್ ಅವರಿಗೆ ತಂದೆ ಲಖ್ವಿಂದರ್ ಸಿಂಗ್ ಮತ್ತು ತಾಯಿ ಕೀರ್ತ್ ಗಿಲ್ ಅವರು ಕಳುಹಿಸಿದ ಸಂದೇಶವನ್ನು ಅವರಿಗೆ ಕೇಳಿಸಿದ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ. ಲಖ್ವಿಂದರ್ ಸಿಂಗ್, ತಮ್ಮ ಮಗನ ಪ್ರದರ್ಶನದಿಂದ ಸಂತೋಷಗೊಂಡಿದ್ದು, ಈ ಶತಕವು ಚಿಕ್ಕವನಾಗಿದ್ದಾಗ ದೇಶಿಯ ಕ್ರಿಕೆಟ್ನಲ್ಲಿ ಆಡಿದ ರೀತಿಯನ್ನು ನೆನಪಿಸುತ್ತದೆ ಎಂದು ಹೇಳಿದರು.
ಶುಭಮಾನ್, ಮಗನೇ ಚೆನ್ನಾಗಿ ಆಡಿದೆ. ಇಂದು ನಿನ್ನ ಬ್ಯಾಟಿಂಗ್ ನೋಡಿದಾಗ ನನ್ನ ಹೃದಯಕ್ಕೆ ತುಂಬಾ ಸಂತೋಷ ಮತ್ತು ನೆಮ್ಮದಿ ಸಿಕ್ಕಿತು. ನೀನು U16, U19 ರಲ್ಲಿ ಆಡುತ್ತಿದ್ದಾಗ ಇದ್ದ ಅನುಭವ ಹಾಗೆಯೇ ಇತ್ತು ಮತ್ತು ನನಗೆ ತುಂಬಾ ಹೆಮ್ಮೆ ಅನಿಸಿತು ಎಂದು ಶುಭಮನ್ ತಂದೆ ಹೇಳಿದ್ದಾರೆ.
ಮಗನೇ, ನಿನ್ನ ಬ್ಯಾಟಿಂಗ್ ನೋಡಿ ತುಂಬಾ ಸಂತೋಷವಾಯಿತು. ಹೀಗೆ ಮುಂದುವರಿಸು, ದೇವರು ನಿನ್ನನ್ನು ಆಶೀರ್ವದಿಸಲಿ ಎಂದು ಅವರ ತಾಯಿ ಸಂದೇಶದಲ್ಲಿ ಹೇಳಿದ್ದಾರೆ.
ತಂದೆ ಮತ್ತು ತಾಯಿಯ ಸಂದೇಶವನ್ನು ಕೇಳಿದ ಗಿಲ್ ಭಾವುಕರಾದರು. ಇದು ನನಗೆ ತುಂಬಾ ಅರ್ಥಪೂರ್ಣವಾಗಿದೆ ಎಂದರು. ನನ್ನ ಎಲ್ಲಾ ಕ್ರಿಕೆಟ್ ಅನ್ನು ನನ್ನ ತಂದೆಗಾಗಿ ಆಡಿದೆ ಅಂದರೆ, ಅವರ ಕಾರಣದಿಂದಾಗಿ ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ನನ್ನ ತಾಯಿ ಮತ್ತು ತಂದೆ ಮಾತ್ರ ಯಾವಾಗಲೂ ನನ್ನೊಂದಿಗಿದ್ದರು. ನಾನು ತ್ರಿಶತಕವನ್ನು ತಪ್ಪಿಸಿಕೊಂಡಿದ್ದಕ್ಕೆ ನನ್ನ ತಂದೆ ಬೇಸರ ಮಾಡಿಕೊಂಡರು. ಈ ಪಂದ್ಯವನ್ನು ಒಳ್ಳೆಯ ರೀತಿಯಲ್ಲಿ ಕೊನೆಗೊಳಿಸಬೇಕೆಂದು ನಾನು ಭಾವಿಸುತ್ತೇನೆ ಎಂದು ಗಿಲ್ ನಗುತ್ತಾ ಹೇಳಿದರು.