ಕ್ರೀಡೆ

ಆರ್​ಸಿಬಿ ಪರ ಆಡಿರುವ ಟೀಮ್​ ಇಂಡಿಯಾದ ಮಾಜಿ ವೇಗಿ​ ಕ್ರಿಕೆಟ್​ಗೆ ವಿದಾಯ

ನವದೆಹಲಿ: ಟೀಮ್​ ಇಂಡಿಯಾ ಮಾಜಿ ವೇಗಿ ಸಿದ್ಧಾರ್ಥ್​ ಕೌಲ್​ ಗುರುವಾರ ಭಾರತೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಅವರು 2018-19ರಲ್ಲಿ ಭಾರತ ಪರ ತಲಾ 3 ಏಕದಿನ ಮತ್ತು ಟಿ20 ಪಂದ್ಯ ಆಡಿದ್ದರು. ಈ ಪೈಕಿ ಟಿ20ಯಲ್ಲಿ 4 ವಿಕೆಟ್​ ಕಬಳಿಸಿದ್ದರು.

ಪಂಜಾಬ್​ನ 34 ವರ್ಷದ ಸಿದ್ಧಾರ್ಥ್​ ಐಪಿಎಲ್​ನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್​ (ಈಗ ಕ್ಯಾಪಿಟಲ್ಸ್​), ಕೆಕೆಆರ್​, ಸನ್​ರೈಸರ್ಸ್​ ಮತ್ತು ಆರ್​ಸಿಬಿ ಪರ ಆಡಿದ್ದಾರೆ. 2008ರಲ್ಲಿ ವಿರಾಟ್​ ಕೊಹ್ಲಿ ಸಾರಥ್ಯದಲ್ಲಿ 19 ವಯೋಮಿತಿ ವಿಶ್ವಕಪ್​ ಗೆದ್ದ ಭಾರತ ತಂಡದ ಪ್ರಮುಖ ವೇಗಿಯಾಗಿದ್ದ ಸಿದ್ಧಾರ್ಥ್​ ಕೌಲ್​, ಇನ್ನು ವಿದೇಶಿ ಟಿ20 ಲೀಗ್​ಗಳಲ್ಲಿ ಆಡುವ ನಿರೀಕ್ಷೆ ಇದೆ.

ದೇಶೀಯ ಕ್ರಿಕೆಟ್​ನಲ್ಲಿ ಒಟ್ಟಾರೆ 88 ಪ್ರಥಮ ದರ್ಜೆ ಪಂದ್ಯ ಆಡಿರುವ ಅವರು, 297 ವಿಕೆಟ್​ ಕಬಳಿಸಿದ್ದಾರೆ. 111 ಲಿಸ್ಟ್​ ಎ ಏಕದಿನ ಪಂದ್ಯಗಳಲ್ಲಿ 199 ವಿಕೆಟ್​ ಮತ್ತು 145 ಟಿ20 ಪಂದ್ಯಗಳಲ್ಲಿ 182 ವಿಕೆಟ್​ ಗಳಿಸಿದ್ದಾರೆ..