ಕ್ರೀಡೆ

Delhi Capitals ತಂಡದ ಉಪನಾಯಕನಾದ ಫಾಪ್​​ ಡು ಪ್ಲೆಸಿಸ್​!

Delhi Capitals: ಇಂಡಿಯನ್​​ ಪ್ರೀಮಿಯರ್​ ಲೀಗ್​(IPL) 2025ರ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಉಪ ನಾಯಕನನ್ನಾಗಿ ದಕ್ಷಿಣ ಆಫ್ರಿಕಾದ ಆಟಗಾರ ಫಾಪ್​​ ಡು ಪ್ಲೆಸಿಸ್​ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್​ ಪ್ರಾಂಚೈಸಿ ಹೇಳಿಕೊಂಡಿದೆ.

ಇದೇ ಮಾರ್ಚ್​ 22 ರಂದು ಆರಂಭವಾಗುವ IPL ಸೀಸನ್​ 18ರ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಕ್ಯಾಪ್ಟನ್​ ಆಗಿ ಅಕ್ಷರ್​ ಪಟೇಲ್​ ಅವರನ್ನು ಈಗಾಗಲೇ ನೇಮಕ ಮಾಡಲಾಗಿದೆ. ಇದೀಗ ಡುಪ್ಲೆಸಿಸ್​ ಅವರನ್ನು ವೈಸ್​ ಕ್ಯಾಪ್ಟನ್​ ಮಾಡಲಾಗಿದ್ದು, ಈ ಬಾರಿ ಕಪ್​ ಗೆಲ್ಲುವ ತಂತ್ರಗಳನ್ನು ತಂಡ ಆಳವಡಿಸಿಕೊಳ್ಳುತ್ತಿದೆ.

ಕಳೆದ ಮೂರು ಸೀಸನ್​ಗಳಲ್ಲಿ ಆರ್​ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಫಾಪ್​​ ಡುಪ್ಲೆಸಿಸ್​ ಕಪ್​ ಗೆಲ್ಲುವಲ್ಲಿ ವಿಫಲರಾಗಿದ್ದರು. ಹೀಗಾಗಿ, ಆರ್​ಸಿಬಿ ಪ್ರಾಂಚೈಸಿ ಫಾಪ್​​ ಡುಪ್ಲೆಸಿಸ್​ ಅವರನ್ನು ಈ ಬಾರಿಯ ಸೀಸನ್​ನಿಂದ ಕೈಬಿಟ್ಟಿತ್ತು.

ವಿಡಿಯೋ ಹಂಚಿಕೊಂಡ ಡೆಲ್ಲಿ ಕ್ಯಾಪಿಟಲ್ಸ್​

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೊಸ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಫಾಪ್​​ ಡುಪ್ಲೆಸಿಸ್​ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡುತ್ತಿರುವ ದೃಶ್ಯ ಕಂಡುಬಂದಿದೆ. ಮಾತನಾಡುವಾಗ ಅವರೇ, "ಹೌದು, ನಾನು ಡೆಲ್ಲಿ ಕ್ಯಾಪಿಟಲ್ಸ್‌ನ ಉಪನಾಯಕ" ಎಂದು ಹೇಳಿದ್ದಾರೆ.ಇನ್ನು ಈ ಬಾರಿಯ ಹರಾಜಿನ ವಿಷಯಕ್ಕೆ ಬಂದಾಗ, ಡೆಲ್ಲಿ ಕ್ಯಾಪಿಟಲ್ಸ್ ಡುಪ್ಲೆಸಿಸ್ ಅವರನ್ನು 2 ಕೋಟಿ ರೂ.ಗಳಿಗೆ ಬಿಡ್ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.(ಏಜೆನ್ಸೀಸ್​)