ನವದೆಹಲಿ: ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 43ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ರಿಷಭ್ ಪಂತ್ ಕ್ಯಾಪ್ಟನ್ಸಿಯ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಗಳು ಮುಖಾಮುಖಿಯಾಗಿ ಸೆಣಸಾಡಿದ್ದು, ಭಾರೀ ಹಣಾಹಣಿಯಲ್ಲಿ 10 ರನ್ಗಳಿಂದ ಮುಂಬೈ ಡೆಲ್ಲಿ ಎದುರು ಸೋಲಿಗೆ ಶರಣಾಯಿತು.
ಇದನ್ನೂ ಓದಿ: ಅವರ ಪ್ರೇಯಸಿಗಾಗಿ ನನ್ನ ಅವಕಾಶ ಕಿತ್ತುಕೊಂಡ್ರು! ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಡೆಲ್ಲಿ ಪಡೆಗೆ ಉತ್ತಮ ಓಪನಿಂಗ್ ಸಿಕ್ಕಿದ್ದು, 20 ಓವರ್ಗಳಲ್ಲಿ ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ 257 ರನ್ಗಳನ್ನು ಕಲೆಹಾಕಿತು. ಈ ಬೃಹತ್ ಗುರಿಯನ್ನು ಮುಂಬೈಗೆ ಚೇಸ್ ಮಾಡಲು ಸವಾಲು ಹಾಕಿದ ಡೆಲ್ಲಿ ಕ್ಯಾಪಿಟಲ್ಸ್, ಹಾರ್ದಿಕ್ ಪಡೆಯನ್ನು ಗುರಿ ತಲುಪದಂತೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಈ ವೇಳೆ 14ನೇ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಬೃಹತ್ ರನ್ ಚೇಸ್ ಮಾಡುತ್ತಿದ್ದ ಮುಂಬೈನ ಸ್ಪೋಟಕ ಬ್ಯಾಟ್ಸ್ಮನ್ ಟಿಮ್ ಡೇವಿಡ್, ಕಲೀಲ್ ಅಹಮ್ಮದ್ ಓವರ್ನಲ್ಲಿ ನೇರವಾಗಿ ಅಪಾರ ಸಂಖ್ಯೆಯಲ್ಲಿ ಕುಣಿದಾಡುತ್ತಿದ್ದ ಎಂಐ ಅಭಿಮಾನಿಗಳತ್ತ ಸಿಕ್ಸ್ ಹೊಡೆದರು. ಈ ಕ್ಯಾಚ್ ಹಿಡಿಯಲೇಬೇಕೆಂದು ಮುಂದೆ ಬಂದ ಅಭಿಮಾನಿಯೊಬ್ಬ ಕ್ಯಾಚ್ ಮಿಸ್ ಮಾಡಿಕೊಂಡಿದ್ದು, ಮುಖಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದಾನೆ.
ಕೈಗೆ ಬರಬೇಕಿದ್ದ ಕ್ಯಾಚ್ ಮಿಸ್ ಆದ ಕಾರಣ, ಬಾಲ್ ನೇರವಾಗಿ ಅಭಿಮಾನಿಯ ಮುಖಕ್ಕೆ ರಭಸದಿಂದ ಹೊಡೆದಿದೆ. ಕೂಡಲೇ ಆತ ನೋವಿನಿಂದ ಚೀರಾಡಿದ್ದು, ಮುಖಕ್ಕೆ ಕರ್ಚೀಫ್ ಹಿಡಿದು ಹೆಚ್ಚಿನ ಚಿಕಿತ್ಸೆಗೆಂದು ಹತ್ತಿರದ ಆಸ್ಪತ್ರೆಗೆ ತೆರಳಿರುವುದಾಗಿ ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).