ನವದೆಹಲಿ: ನವೆಂಬರ್ 26ರಿಂದ ಆಸ್ಟ್ರೇಲಿಯಾ (Australia) ಹಾಗೂ ಭಾರತದ (india) ನಡುವೆ ಆರಂಭವಾಗಲಿರುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಗೆ ಈಗಾಗಲೇ ಟೀಮ್ ಇಂಡಿಯಾ (Team India) ತಯಾರಿ ಆರಂಭಿಸಿದ್ದು, ಬಾಂಗ್ಲಾ ವಿರುದ್ಧ ಸರಣಿ ಗೆಲ್ಲುವ ಮೂಲಕ ಅದಕ್ಕೆ ಮುನ್ನುಡಿ ಬರೆದಿದೆ. ಬಾಂಗ್ಲಾ (Bangladesh) ವಿರುದ್ಧದ ಸರಣಿ ಬಳಿಕ ನ್ಯೂಜಿಲೆಂಡ್ (NewZealand) ಹಾಗೂ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಟೆಸ್ಟ್ ಸರಣಿ ಆಡಲಿರುವ ಭಾರತ (India) ಆ ಬಳಿಕ ಆಸ್ಟ್ರೇಲಿಯಾದ (Australia) ಸವಾಲನ್ನು ಎದುರಿಸಲಿದೆ. ಇನ್ನೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಕುರಿತು ದಿಗ್ಗಜ ಕ್ರಿಕೆಟಿಗರೊಬ್ಬರು (legendary Cricketer) ಮಾತನಾಡಿದ್ದು, ಆತನನ್ನು ಹಾಡಿಹೊಗಳಿದ್ದಾರೆ.
ಸಾಮಾನ್ಯವಾಗಿ ನಾವು ನೋಡಿರುಚಂತೆ ಯಾವುದಾದರು ಅಂತಾರಾಷ್ಟ್ರೀಯ ಟೂರ್ನಿ (International Tourney) ಅಥವಾ ಸರಣಿ (Series) ಆರಂಭವಾಗುವುದಕ್ಕೂ ಮುನ್ನ ಉಭಯ ದೇಶಗಳ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಇವರುಗಳು ನೀಡುವ ವ್ಯಕ್ತಿರಿಕ್ತ ಹೇಳಕೆಗಳು ಉಭಯ ದೇಶಗಳ ಕ್ರೀಡಾಭಿಮಾನಿಗಳನ್ನು ಕೆರಳಿ ಕೆಂಡವಾಗಿಸುತ್ತದೆ. ಇದೀಗ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ (Border-Gavaskar Trophy) ಕುರಿತಂತೆ ವೆಸ್ಟ್ ಇಂಡೀಸ್ನ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ (Brian Lara) ಯಶಸ್ವಿ ಜೈಸ್ವಾಲ್ (Yashasvi Jaiswal) ಕುರಿತು ಮಾತನಾಡಿದ್ದಾರೆ.
ಆತ ಉತ್ತಮವಾಗಿ ಆಡುತ್ತಾನೆ ಎಂಬ ನಿರೀಕ್ಷೆ ನನಗಿದೆ. ಯಾವುದೇ ಪರಿಸ್ಥಿತಿಯಲ್ಲೂ ಕಣಕ್ಕಿಳಿಸಿದರೂ ಆತ ತಂಡದ ಪರ ನಿಲ್ಲುತ್ತಾನೆ ಎಂಬ ವಿಶ್ವಾಸ ನನಗಿದೆ. ಹೊಂದಾಣಿಕೆಯು ನಿಮ್ಮ ಪ್ರತಿಭೆಯನ್ನು ಯಾವುದೇ ಪರಿಸ್ಥಿತಿಗಳಲ್ಲಿ ಬೆಂಬಲಿಸುವ ನಿಮ್ಮ ಸಾಮರ್ಥ್ಯವಾಗಿದೆ. ನಾನು ಇದನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಹೇಳುತ್ತೇನೆ ಏಕೆಂದರೆ ಭಾರತದಲ್ಲಿ ಪರಿಸ್ಥಿತಿಗಳು ಬದಲಾಗಿವೆ. ನನ್ನ ಪ್ರಕಾರ ನೋಡುವುದಾದರೆ ತವರು ನೆಲದಿಂದ ಎಲ್ಲೋ ದೂರದ ಆಸ್ಟ್ರೇಲಿಯಾದಲ್ಲಿ ಆಡುವುದು ನಮಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಭಾರತ ತಂಡವು ಗೆಲ್ಲಲು ಸಮರ್ಥವಾಗಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ (Brian Lara) ಯಶಸ್ವಿ ಜೈಸ್ವಾಲ್ (Yashasvi Jaiswal) ಕುರಿತು ಅಭಿಪ್ರಾಯಪಟ್ಟಿದ್ದಾರೆ.
ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ (Test Series) ನವೆಂಬರ್ 26ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ (Border-Gavaskar) ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) 2023-2025 ಅಡಿಯಲ್ಲಿ ಆಡಲಾಗುತ್ತಿದೆ.