ನವದೆಹಲಿ: ಕನ್ನಡಿಗ ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ 14 ಕೋಟಿ ರೂ. ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿರುವ ನಡುವೆ, ಈ ಮೊದಲೇ ರಿಟೇನ್ ಆಗಿರುವ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ಗೆ ಈ ಬಾರಿ ನಾಯಕತ್ವ ವಹಿಸುವ ಸಾಧ್ಯತೆ ಕಾಣಿಸಿದೆ.
ಅಕ್ಷರ್ ಪಟೇಲ್ 16.50 ಕೋಟಿ ರೂ.ಗೆ ಡೆಲ್ಲಿ ತಂಡದಲ್ಲಿ ರಿಟೇನ್ ಆಗಿದ್ದರು. 2019ರಿಂದ ಡೆಲ್ಲಿ ತಂಡದಲ್ಲೇ ಇರುವ ಅಕ್ಷರ್, ಕಳೆದೆರಡು ಆವೃತ್ತಿಗಳಲ್ಲಿ ತಂಡದ ಉಪನಾಯಕರೂ ಆಗಿದ್ದರು. ಮಾಜಿ ಕ್ರಿಕೆಟಿಗ ಹಾಗೂ ವಿಶ್ಲೇಷಕ ಆಕಾಶ್ ಚೋಪ್ರಾ ಕೂಡ ರಾಹುಲ್ಗಿಂತ ಅಕ್ಷರ್ಗೆ ನಾಯಕತ್ವ ವಹಿಸುವುದು ಉತ್ತಮ ಆಯ್ಕೆಯಾಗಿರಲಿದೆ ಎಂದಿದ್ದಾರೆ.
ಕಳೆದ 3 ಆವೃತ್ತಿಗಳಲ್ಲಿ ಆರ್ಸಿಬಿ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ಕೂಡ 2 ಕೋಟಿ ರೂ.ಗೆ ಡೆಲ್ಲಿ ತಂಡ ಸೇರಿದ್ದು, ನಾಯಕತ್ವದ ರೇಸ್ನಲ್ಲಿ ಮತ್ತೋರ್ವ ಆಟಗಾರರೆನಿಸಿದ್ದಾರೆ.