ಕ್ರೀಡೆ

ಆತ ಎಂದಾದರು ವಿಶ್ವಕಪ್​ ಎತ್ತಿ ಹಿಡಿದಿದ್ದಾನಾ; ಭಾರತದ ವಿರುದ್ಧ ಆರೋಪ ಮಾಡಿದ ಮಾಜಿ ಆಟಗಾರನಿಗೆ ಖಡಕ್​ ತಿರುಗೇಟು ಕೊಟ್ಟ ರವಿಶಾಸ್ತ್ರಿ

ನವದೆಹಲಿ: ಟಿ20 ವಿಶ್ವಕಪ್​ನಲ್ಲಿ ಭಾರತ ಎರಡನೇ ಬಾರಿ ಕಪ್​ ಗೆದ್ದಿದ್ದು, 17 ವರ್ಷಗಳ ಬಳಿಕ ಚುಟುಕು ಮಾದರಿಯಲ್ಲಿ ವಿಶ್ವ ಚಾಂಪಿಯನ್​ ಆದ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಬಾರಿ ಭಾರತ ಕಪ್​ ಗೆದ್ದಿರುವುದು ಯಾಕೋ ಬೇರೆ ತಂಡಗಳಿಗೆ ಅಷ್ಟಾಗಿ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಾಣಿಸುತ್ತದೆ. ಇದಕ್ಕೆ ಙಊರಕವೆಂಬಂತೆ ಮಾಜಿ ಕ್ರಿಕೆಟಿಗರು ಭಾರತದ ವಿರುದ್ಧ ಹೇಳಿಕೆ ನೀಡಿತ್ತಿದ್ದು, ಇಂಗ್ಲೆಂಡ್​ನ ಮಾಜಿ ಆಟಗಾರ ಮಯಕೆಲ್​ ವಾಗನ್​ ಇದಕ್ಕೆ ಹೊರತಾಗಿಲ್ಲ. ಇದೀಗ ಅವರು ನೀಡಿರುವ ಹೇಳಿಕೆಗೆ ಟೀಮ್​ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ ಖಾರವಾಗಿ ಪ್ರತಿಕ್ರಿಯಿಸ್ದು, ಜಾಗ್ರತೆಯಿಂದ ಮಾತನಾಡುವಂತೆ ಸೂಚಿಸಿದ್ದಾರೆ.

ಟಿ20 ವಿಶ್ವಕಪ್​ನ ಮೊದಲನೇ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೋಲುಂಡಿತ್ತು. ಈ ಕುರಿತು ಮಾತನಾಡಿದ ಮೈಕಲ್​ ವಾನ್​ ಅಫ್ಘಾನಿಸ್ತಾನ ಸೋಲುವುದಕ್ಕೆ ಭಾರತ ಕಾರಣ ಎಂದು ದೂರಿದಿದ್ದರು. ಈ ಕುರಿತು ಮಾತನಾಡಿರುವ ಟೀಮ್​ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ ನನ್ನ ಸಹೋದ್ಯೋಗಿ ಎಂದಾದರು ವಿಶ್ವಕಪ್​ಅನ್ನು ಎತ್ತಿ ಹಿಡಿದಿದ್ದಾರೆಯೇ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಮಯಕೆಲ್​ ವಾಗನ್​ ತನಗೆ ಬೇಕಾದುದ್ದನ್ನು ಹೇಳಬಹುದಾಗಿದೆ. ಭಾರತೀಯರು ಯಾರು ಕುಡ ತಲೆಕೆಡಿಸಿಕೊಳ್ಳುವುದಿಲ್ಲ. ಮೊದಲು ಅವರು ತಮ್ಮ ತವರು ತಂಡದ ಬಗ್ಗೆ ಯೋಚಿಸುವುದು ಸೂಕ್ತ. ಸೆಮಿಫೈನಲ್​ನಲ್ಲಿ ಅವರು ತಂಡದ ಸೋಲಿನ ಬಗ್ಗೆ ಮೊದಲು ಯೋಚನೆ ಮಾಡಲಿ ಆ ನಂತರ ಬೇರೆ ಅವರ ಮೇಲೆ ಆರೋಪ ಮಾಡುವುದು ಸೂಕ್ತ. ಭಾರತಕ್ಕೆ ವಿಶ್ವಕಪ್​ಗಳನ್ನು ಎತ್ತಿ ಹಿಡಿದಿದೆ.

ಇಂಗ್ಲೆಂಡ್​ ಕೂಡ ವಿಶ್ವಕಪ್​ ಗೆದ್ದಿದೆ. ಆದರೆ, ನನ್ನ ಸಹೋದ್ಯೋಗಿ ಎಂದಾದರು ವಿಶ್ವಕಪ್​ಅನ್ನು ಎತ್ತಿ ಹಿಡಿದಿದ್ದಾರೆ ಎಂಬುದನ್ನು ಮೊದಲ ಹೇಳಬೇಕು. ಭಾರತದ ವಿರುದ್ಧ ಆರೋಪ ಮಾಡುವ ಮೊದಲು ಜಾಗ್ರತೆಯಿಂದ ಮಾತನಾಡುವುದು ಸೂಕ್ತ ಎಂದು ಎಚ್ಚರಿಸಿದ್ದಾರೆ. ಭಾರತ ಟಿ20 ವಿಶ್ವಕಪ್​ ಗೆದ್ದಾಗಿನಿಂದ ಮಾಜಿ ಆಟಗಾರರು ಒಂದಿಲ್ಲೊಂದು ಆರೋಪ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.