IND vs ENG: ಪ್ರಸ್ತುತ ಮ್ಯಾಂಚೆಸ್ಟರ್ ಅಂಗಳದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ 2ನೇ ದಿನದಂದು ಆಂಗ್ಲರ ಆರ್ಭಟ ಜೋರಾಗಿದೆ. 358ಕ್ಕೆ ಆಲ್ಔಟ್ ಆದ ಟೀಮ್ ಇಂಡಿಯಾ, ಈ ಸಾಧಾರಣ ಮೊತ್ತವನ್ನು ಕಲೆಹಾಕುವಂತೆ ಬೆನ್ ಸ್ಟೋಕ್ಸ್ ಪಡೆಗೆ ಸವಾಲು ಹಾಕಿತು. ಅಂತೆಯೇ ಅಬ್ಬರಿಸಲು ಪ್ರಾರಂಭಿಸಿದ ಇಂಗ್ಲೆಂಡ್ ಆರಂಭಿಕರಾದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕ್ಕೆಟ್, ಕೇವಲ 14 ಓವರ್ಗಳಲ್ಲೇ 77* ರನ್ ಬಾರಿಸಿದ್ದಾರೆ.
ಇದನ್ನೂ ಓದಿ: ನಟನೆಯಿಂದ ನಿವೃತ್ತಿ ಪಡೆದ ಬಳಿಕ ಇದೇ ನನ್ನ ಕೆಲಸ: ಅಚ್ಚರಿ ಹೇಳಿಕೆ ನೀಡಿದ ‘ಪುಷ್ಪ’ ನಟ | Fahadh Faasil
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಟೀಮ್ ಇಂಡಿಯಾ ಪರ ಕಣಕ್ಕಿಳಿದ ಉಪನಾಯಕ ರಿಷಭ್ ಪಂತ್, ನೋವಿನಲ್ಲೇ ಉತ್ತಮ ಇನ್ನಿಂಗ್ಸ್ ನೀಡಿದರು. ಯಶಸ್ವಿ ಜೈಸ್ವಾಲ್ (58 ರನ್) ಮತ್ತು ಪಂತ್ ಆಕರ್ಷಕ ಅರ್ಧಶತಕ (54 ರನ್, 74 ಎಸೆತ) ತಂಡದ ಒಟ್ಟು ಮೊತ್ತವನ್ನು 300ರ ಗಡಿದಾಟಿಸಲು ಸಹಾಯ ಮಾಡಿತು. 2ನೇ ದಿನದಾಟದಲ್ಲಿ ಇನ್ನೂ ಒಂದಷ್ಟು ಸಮಯ ಬಾಕಿ ಉಳಿದಿರುವಾಗಲೇ 358ಕ್ಕೆ ಆಲ್ಔಟ್ ಆದ ಟೀಮ್ ಇಂಡಿಯಾ, ತಾವು ನೀಡಿದ ಗುರಿಯನ್ನು ಬೆನ್ನತ್ತಿದ ಆಂಗ್ಲರಿಗೆ ಸವಾಲು ತಲುಪದಂತೆ ಕಟ್ಟಿಹಾಕಲು ಎಡವಿತು.