ಕ್ರೀಡೆ

ಭಾರತ ವಿರುದ್ಧ ಮೊದಲ ಟೆಸ್ಟ್​ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ಡೇಂಜರಸ್​ ಆಲ್​ರೌಂಡರ್​​ ಎಂಟ್ರಿ! ಇಲ್ಲಿದೆ ಆಟಗಾರರ ಪಟ್ಟಿ | ENG vs IND

ಮೋಹನ್​ ಶೆಟ್ಟಿ

ENG vs IND Test: ಇದೇ ಜೂನ್​ 20ರಿಂದ ಪ್ರಾರಂಭವಾಗಲಿರುವ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್​ ನಡುವಿನ ಐದು ಪಂದ್ಯಗಳ ಮೊದಲ ಟೆಸ್ಟ್​ ಸರಣಿಗೆ ಇದೀಗ ಇಂಗ್ಲೆಂಡ್ ತಂಡ ಅಧಿಕೃತವಾಗಿ ಪ್ರಕಟಗೊಂಡಿದೆ.

ಗಾಯದ ಕಾರಣದಿಂದಾಗಿ ಕೆಲವು ಸಮಯದಿಂದ ತಂಡದಿಂದ ಹೊರಗುಳಿದಿದ್ದ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಈ ಟೆಸ್ಟ್ ಸರಣಿ ಮೂಲಕ ತಂಡಕ್ಕೆ ಮರಳಿದ್ದಾರೆ. ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ ಮತ್ತು ಜೇಮಿ ಓವರ್ಟನ್​ರಂತರ ಸ್ಟಾರ್ ಆಟಗಾರರನ್ನೇ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಸೇರಿಸಿಕೊಂಡಿದೆ. ತಂಡದಲ್ಲಿ ಗಸ್ ಅಟ್ಕಿನ್ಸನ್ ಗಾಯದ ಕಾರಣದಿಂದಾಗಿ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಹಾಗಿದ್ದರೆ, ಯಾರೆಲ್ಲ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದರ ವಿವರ ಹೀಗಿದೆ ನೋಡಿ.

ಮೊದಲ ಟೆಸ್ಟ್‌ಗೆ ಇಂಗ್ಲೆಂಡ್ ತಂಡ

ಬೆನ್ ಸ್ಟೋಕ್ಸ್ (ನಾಯಕ), ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲ್ಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಾಂಗ್, ಕ್ರಿಸ್ ವೋಕ್ಸ್ ಕಣಕ್ಕಿಳಿಯಲಿದ್ದಾರೆ.

ಭಾರತ ತಂಡ

ಶುಭ್​ಮನ್​ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್​ ಸಿರಾಜ್, ಪರಿಧಿ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್​ ಸಿಂಗ್, ಕುಲದೀಪ್ ಯಾದವ್ ತಂಡದಲ್ಲಿದ್ದಾರೆ.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳಾಪಟ್ಟಿ

  • ಮೊದಲ ಟೆಸ್ಟ್ - ಜೂನ್ 20ರಿಂದ 24 - ಹೆಡಿಂಗ್ಲಿ
  • ಎರಡನೇ ಟೆಸ್ಟ್ - ಜುಲೈ 2ರಿಂದ 6 - ಎಡ್ಜ್‌ಬಾಸ್ಟನ್
  • ಮೂರನೇ ಟೆಸ್ಟ್ - ಜುಲೈ 10ರಿಂದ 14 - ಲಾರ್ಡ್ಸ್
  • ನಾಲ್ಕನೇ ಟೆಸ್ಟ್ - ಜುಲೈ 23ರಿಂದ 27 - ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್
  • ಐದನೇ ಟೆಸ್ಟ್ - ಜುಲೈ 31ರಿಂದ ಆಗಸ್ಟ್ 4 - ಕಿಯಾ ಓವಲ್