ಅಬುಧಾಬಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್, ಮುಂದಿನ ವರ್ಷದ ಜೂನ್ನಲ್ಲಿ ಟಿ20 ವಿಶ್ವಕಪ್ನಲ್ಲಿ ಆಡುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನ ಕಾಣುವ ಸುಳಿವು ನೀಡಿದ್ದಾರೆ.
3 ವರ್ಷಗಳ ಹಿಂದೆ 2020ರಲ್ಲಿ ಕೊನೆಯದಾಗಿ ದಕ್ಷಿಣ ಆಫ್ರಿಕಾ ಪರ ಟಿ20 ಪಂದ್ಯ ಆಡಿರುವ ಪ್ಲೆಸಿಸ್, 2021ರ ಫೆಬ್ರವರಿಯಲ್ಲಿ ಪಾಕ್ ವಿರುದ್ಧ ಟೆಸ್ಟ್ ಆಡಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರು.
ಅಬುಧಾಬಿ ಟಿ10 ಲೀಗ್ನಲ್ಲಿ ಆಡುತ್ತಿರುವ ನಡುವೆ ಮಾಧ್ಯಮದೊಂದಿಗೆ ಮಾತನಾಡಿರುವ 39 ವರ್ಷದ ಪ್ಲೆಸಿಸ್, ದಕ್ಷಿಣ ಆಫ್ರಿಕಾ ಸೀಮಿತ ಓವರ್ ತಂಡದ ಕೋಚ್ ಬಾಬ್ ವಾಲ್ಟರ್ ಜತೆ ಕಳೆದೆರಡು ವರ್ಷಗಳಿಂದ ಚರ್ಚಿಸುತ್ತಿರುವೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ನಂಬಿಕೆ ಹೊಂದಿದ್ದೇನೆ ಎಂದಿದ್ದಾರೆ. ಪ್ಲೆಸಿಸ್ ಕಳೆದ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ 14 ಪಂದ್ಯಗಳಲ್ಲಿ 730 ರನ್ ಬಾರಿಸಿ ಮಿಂಚಿದ್ದರು. ಅವರು 2014, 2016ರ ಟಿ20 ವಿಶ್ವಕಪ್ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದರು.