2025: ತೈವಾನ್‌ನ ತೈಪೆಯ್‌ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಗೇಮ್ಸ್ 2025 ರಲ್ಲಿ ಡಾ. ಸುನೀತಾ ರಾಣಾ ಅಗರವಾಲ್ ಅವರು ಭಾರತವನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನಾಲ್ಕು ಪದಕಗಳನ್ನು ಗೆದ್ದು ಬೀಗಿದ್ದಾರೆ.
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವರ್ಲ್ಡ್ ಮಾಸ್ಟರ್ಸ್ ಗೇಮ್ಸ್, ಜಾಗತಿಕ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸುವ ಎಲ್ಲಾ ವಯಸ್ಕ ಕ್ರೀಡಾಪಟುಗಳನ್ನು ಒಟ್ಟಿಗೆ ತರುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾಕೂಟವಾಗಿದೆ.
ಇದನ್ನೂ ಓದಿ:ಜಗತ್ತಿಗೆ ಭಾರತದ ಸಾಮರ್ಥ್ಯದ ಅರಿವು : ಮಂಥನ ಕಾವೂರು ಉಪನ್ಯಾಸದಲ್ಲಿ ಲೇಖಕ ವಿಕಾಸ್ ಪುತ್ತೂರು ಪ್ರತಿಪಾದನೆ
ತೈಪೆಯ್‌ನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ 60,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು ಡಾ. ಅಗರವಾಲ್ ಅವರು ಸ್ಪರ್ಧಾತ್ಮಕ 50 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ಒಂದು ಬಂಗಾರದ ಪದಕವನ್ನು ಗೆದ್ದಿದ್ದಾರೆ. ಜತೆಗೆ, 50 ಮೀಟರ್ ಬ್ಯಾಕ್‌ಸ್ಟ್ರೋಕ್, 50 ಮೀಟರ್ ಫ್ರೀ ಸ್ಟೈಲ್ ಮತ್ತು 100 ಮೀಟರ್ ಫ್ರೀ ಸ್ಟೈಲ್ ಈಜು ವಿಭಾಗಗಳಲ್ಲಿ ಮೂರು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ:ಗಾಂಧೀಪುರ ಹಾಸ್ಟೆಲ್ಗೆ ಮೂಲ ಸೌಕರ್ಯ ಒದಗಿಸಿ; ಎಸ್ಎಫ್ಐ ನೇತೃತ್ವದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಡಾ. ಸುನೀತಾ ರಾಣಾ ಅಗರವಾಲ್ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಸ್ವಿಮ್ಮಿಂಗ್‌ನಲ್ಲಿ ಕೂಡ ಸಾಧನೆ ಮೆರೆದಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ಅವರು "ಈಜು ಕೇವಲ ಒಂದು ಕ್ರೀಡೆಯಲ್ಲ,ದೇಶ ಸೇವೆ ಮಾಡಲು ಸಿಕ್ಕ ಅವಕಾಶ. ಗೆಲುವು ಸಾಧಿಸಿ ಭಾರತದ ಧ್ವಜ ಮೇಲೆ ಹಾರುವುದನ್ನು ನೋಡುವುದಕ್ಕಿಂತ ಹೆಮ್ಮೆಯ ವಿಷಯ ಮತ್ತೊಂದಿಲ್ಲ,ಈ ಸಾಧನೆಗೆ ನಿರಂತರ ಪ್ರಯತ್ನ,ಪರಿಶ್ರಮ ಕಾರಣವಾಗಿದೆ,ಕುಟುಂಬದ ಬೆಂಬಲದಿಂದ ಸಾಧ್ಯವಾಗಿದೆ" ಎಂದು ಸಂಭ್ರಮ ವ್ಯಕ್ತಪಡಿಸಿದರು.