ನವದೆಹಲಿ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭಾಗಿಯಾಗುವುದು ಬಹುತೇಕ ಅನುಮಾನವಾಗಿದ್ದು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು, ಭದ್ರತೆಯ ಕಾರಣ ನೀಡಿ ಭಾರತ ಪಾಕಿಸ್ತಾನದಲ್ಲಿ ಆಡಲು ಹಿಂದೇಟು ಹಾಕುತ್ತಿದೆ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಕಂಡೀಷನ್ ಹಾಕಿರುವ ಬಿಸಿಸಿಐ ಮಾತಿಗೆ ಅಷ್ಟಾಗಿ ಸೊಪ್ಪು ಹಾಕದ ಪಾಕ್ ಕ್ರಿಕೆಟ್ ಮಂಡಳಿ ಚೆಂಡನ್ನು ಐಸಿಸಿಗೆ ಅಂಗಳಕ್ಕೆ ಎಸೆದಿದ್ದು, ಐಸಿಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂಬುದಾಗಿ ಹೇಳಿದೆ.
ಭಾರತ ಟೂರ್ನಿಯಲ್ಲಿ ಭಾಗಿಯಾಗುತ್ತ ಇಲ್ಲ ಎಂಬುದರ ನಡುವೆಯೇ ಆರ್ಸಿಬಿ ಕ್ರಿಕೆಟ್ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಚಾಂಪಿಯನ್ಸ್ ಟ್ರೋಪಿಯಲ್ಲಿ ಟೀಮ್ ಇಂಡಿಯಾದ ಓಪನಿಂಗ್ಗೆ ರೋಹಿತ್ ಶರ್ಮ ಜೊತೆ ಈತನಿರಬೇಕೆಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಸಹ ನೀಡಿರುವ ದಿನೇಶ್ ಹಲವು ವಿಚಾರಹಳನ್ನು ಹಂಚಿಕೊಂಡಿದ್ದಾರೆ.
ಕ್ರಿಕ್ಬಜ್ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ದಿನೇಶ್, ನನ್ನ ಪ್ರಕಾರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮ ಜೊತೆ ಶುಭಮನ್ಗ ಗಿಲ್ ಆರಂಭಿಕರಾಗಿ ಕಣಕ್ಕಿಳಿದರೆ ಸೂಕ್ತ ಎನ್ನಿಸುತ್ತದೆ. ಏಕೆಂದರೆ ರೋಹಿತ್ ಶರ್ಮ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರೆ, ಗಿಲ್ ತಾಳ್ಮೆಯುತ ಬ್ಯಾಟಿಂಗ್ಗೆ ಹೆಸರುವಾಸಿ. ಹೀಗಾಗಿ ಈ ಜೋಡಿಯನ್ನು ಓಪನರ್ಗಳಾಗಿ ಮುಂದುವರೆಸುವುದು ಉತ್ತಮ ಎಂಬುದು ನನ್ನ ಅನಿಸಿಕೆ.
ಗಿಲ್ ಜೊತೆಗೆ ಬ್ಯಾಕ್ ಅಪ್ ಓಪನರ್ ಆಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ನನ್ನ ಅಭಿಪ್ರಾಯ. ಕೆಂದರೆ ಗಿಲ್ ನಿರೀಕ್ಷಿತ ರೀತಿಯಲ್ಲಿ ಪ್ರದರ್ಶನ ನೀಡದಿದ್ದರೆ ಜೈಸ್ವಾಲ್ ಅವರನ್ನು ಕಣಕ್ಕಿಳಿಸುವುದು ಉತ್ತಮ. ಯುವ ಎಡಗೈ ಬ್ಯಾಟರ್ ಈಗಾಗಲೇ ತಮ್ಮ ಸಾಮರ್ಥ್ಯವನ್ನು ತೋರಿದ್ದು, ಹೀಗಾಗಿ ಜೈಸ್ವಾಲ್ ಕೂಡ ತಂಡದಲ್ಲಿರಬೇಕು. ಮಧ್ಯಮ ಕ್ರಮಾಂಕ ಕೂಡ ಬಲಿಷ್ಠವಾಗಿದ್ದು, ತ್ತಮ ಆರಂಭ ಪಡದರೆ ಭಾರತ ತಂಡವು ಬೃಹತ್ ಮೊತ್ತ ಪೇರಿಸುವುದರಲ್ಲಿ ಅನುಮಾನವೇ ಬೇಡ ಎಂದು ಆರ್ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.