IND vs ENG Test: ಪ್ರಸಕ್ತ ಆಂಗ್ಲರ ನೆಲದಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಟೆಸ್ಟ್ ಹೆಡಿಂಗ್ಲಿಯಲ್ಲಿ ನಡೆಯುತ್ತಿದ್ದು, 4ನೇ ದಿನದ ಪಂದ್ಯದಲ್ಲಿ ಭಾರತ ಮುಂಚೂಣಿಯಲ್ಲಿದೆ. ತಂಡದ ಪರ ಮೂವರು ಸ್ಟಾರ್ ಬ್ಯಾಟರ್ಗಳಿಂದ ಮೂರು ಶತಕಗಳು ದಾಖಲಾಗಿದ್ದೇ ಆದರೂ ಒಂದಷ್ಟು ತಪ್ಪುಗಳು ಇಂಗ್ಲೆಂಡ್ ಬ್ಯಾಟರ್ಗಳ ಹೆಚ್ಚುವರಿ ರನ್ ಕೊಡುಗೆಗೆ ಮರುಜೀವ ಕೊಟ್ಟಿದೆ. ಆಟಗಾರರ ಕುರಿತಂತೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಕೋಚ್ ಮತ್ತು ಕ್ಯಾಪ್ಟನ್ ನಿರ್ಧಾರವನ್ನು ಟೀಕಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಆಲ್ರೌಂಡರ್ ಆಗಿ ಶಾರ್ದೂಲ್ ಠಾಕೂರ್ರನ್ನು ಕಣಕ್ಕಿಳಿಸಿದ ಕ್ಯಾಪ್ಟನ್ ಶುಭಮನ್ ಗಿಲ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರವನ್ನು ಕಾರ್ತಿಕ್ ಟೀಕಿಸಿದ್ದಾರೆ. "ಕ್ರೀಸ್ಗೆ ಬಂದ ಶಾರ್ದೂಲ್ ಹೆಚ್ಚು ಕಾಲ ನಿಲ್ಲದೆ ಹೋಗಿದ್ದು ಮತ್ತು ಮಾಡಿದ ಆರು ಓವರ್ಗಳಲ್ಲಿ 38 ರನ್ ಕೊಟ್ಟು ಒಂದೇ ಒಂದು ವಿಕೆಟ್ ಪಡೆದಿಲ್ಲ. ಅವರನ್ನು ತಂಡದ ಪರ ಆಡಿಸಿದ ನಿರ್ಧಾರ ಎಷ್ಟು ಸರಿ ಎಂಬುದನ್ನು ಮ್ಯಾನೇಜ್ಮೆಂಟ್ ಒಮ್ಮೆ ಗಮನಿಸಬೇಕು. ಒಬ್ಬರ ಬೌಲಿಂಗ್ ಮೇಲೆ ನಂಬಿಕೆ, ಭರವಸೆ ಇಲ್ಲದೆ ಮೇಲೆ ಏಕೆ ಆಡಿಸಬೇಕು" ಎಂದು ಮ್ಯಾನೇಜ್ಮೆಂಟ್ಗೆ ಪ್ರಶ್ನಿಸಿದ್ದಾರೆ.
"ತಂಡಕ್ಕೆ ಠಾಕೂರ್ರನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿಜ. ಆದರೆ, ಅವರನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲು ಮತ್ತು ನಂಬಿಕೆಯಿಡಲು ಏಕೆ ಇಷ್ಟೊಂದು ಹಿಂದೇಟು ಹಾಕುತ್ತಿದ್ದಾರೆ ಅನ್ನೋದು ತಿಳಿಯುತ್ತಿಲ್ಲ. ಉಳಿದೆಲ್ಲ ವೇಗಿಗಳು 20ಕ್ಕೂ ಅಧಿಕ ಓವರ್ಗಳನ್ನು ಮಾಡಿದರೆ, ಶಾರ್ದೂಲ್ ಕೇವಲ 6 ಓವರ್ಗಳನ್ನು ಮಾಡಿದ್ದಾರೆ" ಎಂದು ಆಕಾಶ್ ಚೋಪ್ರಾ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).