ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕ್ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದ್ದು, ಆತಿಥೇಯ ರಾಷ್ಟ್ರವನ್ನು ಸೆಮೀಸ್ ರೇಸ್ನಿಂದ ಹೊರದಬ್ಬಿದೆ. 8 ವರ್ಷದ ಕೆಳಗೆ ತಂಡದ ನಾಯಕರಾಗಿ ಫೈನಲ್‌ನಲ್ಲಿ ಮುಗ್ಗರಿಸಿದ್ದ ವಿರಾಟ್ ಕೊಹ್ಲಿ (Virat Kohli) ಭಾನುವಾರ 51ನೇ ಏಕದಿನ ಶತಕ ಬಾರಿಸುವ ಮೂಲಕ ಭಾರತದ ಗೆಲುವಿನ ರೂವಾರಿಯಾದರು.
ಏಕದಿನ ಮಾದರಿಯಲ್ಲಿ 51ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ (Virat Kohli) ದಿಗ್ಗಜರ ಹೆಸರಿನಲ್ಲಿದ್ದ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾಗೆ ಗೆಲ್ಲಲು 2 ರನ್ಗಳ ಅವಶ್ಯಕತೆಯಿದ್ದಾಗ ಬೌಂಡರಿ ಬಾರಿಸಿ ವಿರಾಟ್ ಕೊಹ್ಲಿ ತಮ್ಮ 51ನೇ ಶತಕ ಪೂರೈಸಿದ್ದರು. ಆದರೆ ಇದಕ್ಕೂ ಮುನ್ನವೇ ವಿರಾಟ್ ಕೊಹ್ಲಿಯ (Virat Kohli) ಶತಕ ತಪ್ಪಿಸಲು ಪಾಕಿಸ್ತಾನ ಇನ್ನಿಲ್ಲದ ಪ್ರಯತ್ನ ಮಾಡಿರುವುದು ತನ್ನ ವಿಶ್ವದ ಮುಂದೆ ಮತ್ತೊಮ್ಮೆ ತನ್ನ ನರಿಬುದ್ಧಿ ಬಯಲಾಗಿದೆ.
41 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 225 ರನ್ ಕಲೆಹಾಕಿತ್ತು. ಅಲ್ಲದೆ ಭಾರತ ತಂಡಕ್ಕೆ ಗೆಲ್ಲಲು ಇನ್ನೂ 17 ರನ್ಗಳ ಅವಶ್ಯಕತೆಯಿತ್ತು. ಇತ್ತ ವಿರಾಟ್ ಕೊಹ್ಲಿಗೆ ಶತಕ ಪೂರೈಸಲು 13 ರನ್ ಬೇಕಿತ್ತು. 42ನೇ ಓವರ್ ಬೌಲ್ ಮಾಡಿದ ವೇಗಿ ಶಹೀನ್ ಶಾ ಅಫ್ರಿದಿ ಸತತ ವೈಡ್ಗಳನ್ನು ಎಸೆಯುವ ಮೂಲಕ ಅಚ್ಚರಿ ಮೂಡಿಸಿದರು. 42ನೇ ಓವರ್ನ 3ನೇ ಎಸೆತದಲ್ಲಿ ಅಚ್ಚರಿ ಎಂಬಂತೆ ವೈಡ್ ಎಸೆದರು. ಇದಾದ ಬಳಿಕ ಮತ್ತೊಂದು ವೈಡ್ ಎಸೆದರು. ಆ ಬಳಿಕ 4ನೇ ಎಸೆತದಲ್ಲಿ ಇನ್ನೊಂದು ವೈಡ್ ಎಸೆಯುವ ಮೂಲಕ ಅಚ್ಚರಿ ಮೂಡಿಸಿದರು.
ಒಂದೇ ಓವರ್ನಲ್ಲಿ ಸತತ ನಾಲ್ಕು ವೈಡ್ಗಳನ್ನು ಎಸೆಯುವ ಮೂಲಕ ವೇಗಿ ಶಹೀನ್ ಶಾ ಅಫ್ರಿದಿ ವಿರಾಟ್ ಶತಕವಂಚಿತರಾಗುವಂತೆ ಮಾಡಲು ಯತ್ನಿಸಿದರು. ಪಾಕ್ ವೇಗಿ ನರಬುದ್ಧಿಯ ಹೊರತಾಗಿಯೂ ಓವರ್ನಲ್ಲಿ ವಿರಾಟ್ ಕೊಹ್ಲಿಗೆ ಸ್ಟ್ರೈಕ್ ಲಭಿಸಿತು. 42ನೇ ಓವರ್ನ ಮೂರನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಆಕರ್ಷಕ ಫೋರ್ ಬಾರಿಸಿ ವಿರಾಟ್ ಕೊಹ್ಲಿ ಶತಕ ಪೂರೈಸಿದರು. ಅತ್ತ ಕಿಂಗ್ ಕೊಹ್ಲಿಯ ಶತಕ ತಪ್ಪಿಸಲು ಯತ್ನಿಸಿದ್ದ ಶಾಹೀನ್ ಅಫ್ರಿದಿಯನ್ನು ಪ್ರೇಕ್ಷಕರು ಲೂಸರ್ ಲೂಸರ್ ಎಂದು ಕರೆದಿದ್ದು, ಈ ಸುದ್ದಿ ವೈರಲ್ ಆಗಿದೆ.