ನವದೆಹಲಿ: ಮಹಾಮಾರಿ ಕರೊನಾ ವೈರಸ್‌ನಿಂದಾಗಿ ಕಳೆದ ಮೂರು ತಿಂಗಳಿಂದ ಎಲ್ಲರೂ ಇದ್ದಲ್ಲಿಯೇ ಲಾಕ್ ಆಗಿದ್ದರು. ಇದರಿಂದ ಕೇವಲ ಜನ ಸಾಮಾನ್ಯರಲ್ಲದೇ, ಪ್ರಾಣಿ ಸಂಕುಲ, ದನ ಜಾನುವಾರುಗಳ ಸಂಕಷ್ಟ ಹೇಳತೀರದು. ಲಾಕ್‌ಡೌನ್ ಸಡಿಲಿಕೆ ಬಳಿಕ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ ಪತ್ನಿ, ಮಗ ಸಮೇತ ಬಿಡಾಡಿ ದನಗಳಿಗೆ ಆಹಾರ ನೀಡುವ ಮೂಲಕ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಮಗನಿಗೆ ಹಸಿವಿನ ಹಾಗೂ ಜೀವನ ಕಷ್ಟ ತಿಳಿಸುವ ಸಲುವಾಗಿ ಬಿಡಾಡಿ ದನಗಳಿಗೆ ಆಹಾರ ನೀಡಿದ್ದಾಗಿ ಶಿಖರ್ ಧವನ್ ಹೇಳಿಕೊಂಡಿದ್ದಾರೆ.
ಧವನ್ ಕಾರ್ಯಕ್ಕೆ ಭಾರತ ತಂಡದ ಸಹ ಆಟಗಾರರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹರ್ಭಜನ್ ಸಿಂಗ್, ಕುಲದೀಪ್ ಯಾದವ್ ಸೇರಿದಂತೆ ಹಾರ್ಟ್ ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ.