ಕ್ರೀಡೆ

ಒಪೆರಾ ಹೌಸ್​​ ಮುಂದೆ ಧನಶ್ರೀ ವರ್ಮಾ; ಫೋಟೋ ಕ್ಲಿಕ್ಕಿಸಿದ ಸೂರ್ಯಕುಮಾರ್ ಯಾದವ್

ಸಿಡ್ನಿ: ಟಿ-20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾ ಆಟಗಾರರು ತಮ್ಮ ಕುಟುಂಬ ಸಮೇತ ಆಸ್ಟ್ರೇಲಿಯಾದಲ್ಲಿದ್ದಾರೆ. ಇದೀಗ ಬಿಡುವಿನ ವೇಳೆ ಕ್ರಿಕೆಟಿಗರು ತಮ್ಮ ಪತ್ನಿಯರೊಂದಿಗೆ ಆಸ್ಟ್ರೇಲಿಯಾದಲ್ಲಿ ಸುತ್ತಾಡುತ್ತಿದ್ದಾರೆ.

ಟೀಂ ಇಂಡಿಯಾದ ಸ್ಪಿನ್ ಬೌಲರ್ ಯುಜುವೇಂದ್ರ ಚಾಹಲ್, ತಮ್ಮ ಪತ್ನಿಯೊಂದಿಗೆ ಸಿಡ್ನಿಯಲ್ಲಿರುವ ಸಿಡ್ನಿ ಒಪೇರಾ ಹೌಸ್‌ಗೆ ತೆರಳಿದ್ದಾರೆ. ಈ ವೇಳೆ ಚಹಲ್ ಪತ್ನಿ ಧನಶ್ರೀ ವರ್ಮಾ ಗುಲಾಬಿ ಬಣ್ಣದ ಡ್ರೆಸ್ ಧರಿಸಿ ಮಿಂಚಿದ್ದಾರೆ. ಈ ವೇಳೆ ಸೂರ್ಯ ಕುಮಾರ್ ಯಾದವ್ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋವನ್ನು ಧನಶ್ರೀ ವರ್ಮಾ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಫೋಟೋ ಕ್ಲಿಕ್ಕಿಸಿದ ಸೂರ್ಯ ಕುಮಾರ್​ಗೆ ಥ್ಯಾಂಕ್ಯೂ ಹೇಳಿದ್ದಾರೆ.

ಕೆಲವು ಸಮಯಗಳ ಹಿಂದೆ ಧನಶ್ರೀ ವರ್ಮಾ ತಮ್ಮ ಸಾಮಾಜಿಕ ಜಾಲತಾಣದಿಂದ ಚಹಾಲ್ ಹೆಸರನ್ನು ತೆಗೆದುಹಾಕಿದ್ದರು. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಕೊನೆಗೆ ಚಾಹಲ್ ದಂಪತಿ ಈ ವದಂತಿ ತಳ್ಳಿ ಹಾಕಿದ್ದರು. ಧನಶ್ರೀ ವರ್ಮಾ ನೃತ್ಯ ಸಂಯೋಜಕಿ ಮತ್ತು ದಂತ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.