ನವದೆಹಲಿ: ಅಸ್ಸಾಂನ ದೇವಜಿತ್ ಸೈಕಿಯಾ ಬಿಸಿಸಿಐನ ಹಂಗಾಮಿ ಕಾರ್ಯದರ್ಶಿಯಾಗಿ ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ ಅವರಿಂದ ನೇಮಕಗೊಂಡಿದ್ದಾರೆ.
ಜಯ್ ಷಾ ಇತ್ತೀಚೆಗೆ ಐಸಿಸಿ ಚೇರ್ಮನ್ ಆಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ, ಬಿನ್ನಿ ತನ್ನ ವಿಶೇಷ ಸಾಂವಿಧಾನಿಕ ಅಧಿಕಾರವನ್ನು ಬಳಸಿ ಮುಂದಿನ ವರ್ಷ ಸೆಪ್ಟೆಂಬರ್ವರೆಗೂ ಸೈಕಿಯಾರನ್ನು ನೇಮಿಸಿದ್ದಾರೆ.
ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಹಾಗೂ ವೃತ್ತಿಯಲ್ಲಿ ವಕೀಲರಾಗಿರುವ 55 ವರ್ಷದ ಸೈಕಿಯಾ ಇದುವರೆಗೆ ಬಿಸಿಸಿಐ ಜಂಟಿ ಕಾರ್ಯದರ್ಶಿಯಾಗಿದ್ದರು. ಇನ್ನು ಮುಂದಿನ ವರ್ಷದ ಸೆಪ್ಟೆಂಬರ್ನಲ್ಲಿ ನಡೆಯುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲೇ ಪೂರ್ಣ ಪ್ರಮಾಣದ ಕಾರ್ಯದರ್ಶಿಯ ಆಯ್ಕೆಯಾಗಲಿದೆ ಎನ್ನಲಾಗಿದೆ.