ದುಬೈ: ಮಂಗಳವಾರ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ದೇಶೀಯ ಬ್ಯಾಟರ್ಗಳು ಭಾರಿ ಬೇಡಿಕೆ ಪಡೆದರು. ಕಳೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಎದುರಿಸಿದ ಪ್ರತಿ 11 ಎಸೆತಕ್ಕೊಂದರಂತೆ 18 ಸಿಕ್ಸರ್ ಸಿಡಿಸಿ ಮಿಂಚಿದ್ದ ಉತ್ತರ ಪ್ರದೇಶದ 20 ವರ್ಷದ ಬ್ಯಾಟರ್ ಸಮೀರ್ ರಿಜ್ವಿ 8.40 ಕೋಟಿ ರೂ.ಗೆ ಸಿಎಸ್ಕೆ ತಂಡ ಸೇರಿದರು. ಯುಪಿ ಟಿ20 ಲೀಗ್ನಲ್ಲೂ ಆರ್ಭಟಿಸಿದ್ದ ರಿಜ್ವಿ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದರು.
ವಿದರ್ಭದ ಎಡಗೈ ಬ್ಯಾಟರ್ ಶುಭಂ ದುಬೆ 5.80 ಕೋಟಿ ರೂ.ಗೆ ರಾಜಸ್ಥಾನ ತಂಡ ಸೇರಿದರು. 29 ವರ್ಷದ ಶುಭಂ ಸಯ್ಯದ್ ಮುಷ್ತಾಕ್ ಟ್ರೋಫಿಯಲ್ಲಿ 187.28ರ ಸ್ಟ್ರೆ$ಕ್ರೇಟ್ನಲ್ಲಿ ರನ್ ಸಿಡಿಸಿದ್ದರು. ತಮಿಳುನಾಡಿನ ಸ್ಫೋಟಕ ಬ್ಯಾಟರ್ ಶಾರುಖ್ ಖಾನ್ 7.40 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ಪಾಲಾದರು. ಶಾರುಖ್ರನ್ನು ಈ ಬಾರಿ ರಿಲೀಸ್ ಮಾಡಿದ್ದ ಪಂಜಾಬ್ ಕಿಂಗ್ಸ್ ಕೂಡ ಅವರನ್ನು ಮರಳಿ ಸಂಪಾದಿಸಲು ಪೈಪೋಟಿಯೊಡ್ಡಿತು.
ಜಾರ್ಖಂಡ್ ವಿಕೆಟ್ ಕೀಪರ್ ಕುಮಾರ್ ಕುಶಾಗ್ರ 7.20 ಕೋಟಿ ರೂ.ಗೆ ಡೆಲ್ಲಿ ತಂಡ ಸೇರಿದರು. 19 ವರ್ಷದ ಕುಶಾಗ್ರ ಕಳೆದ ವಿಜಯ್ ಹಜಾರೆ ಟ್ರೋಫಿ, ದೇವಧರ್ ಟ್ರೋಫಿಯಲ್ಲೂ ಮಿಂಚಿದ್ದರು.