ನವದೆಹಲಿ: 2025ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಐಪಿಎಲ್ 18ನೇ (IPL 2025) ಆವೃತ್ತಿಗೆ ಇಂದಿನಿಂದಲೇ ಭರ್ಜರಿ ತಯಾರಿಗಳು ನಡೆಯುತ್ತಿದ್ದು, ಈಗಾಗಲೇ ರಿಟೆನ್ಶನ್ ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದೆ. ಯಾವ ನಾಲ್ಕು ಆಟಗಾರರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲು ಆಯಾ ಫ್ರಾಂಚೈಸಿ ನಿರ್ಧರಿಸಿದೆ ಎಂಬುದನ್ನು ಅ.31ರಂದು ಐಪಿಎಲ್ ಮಂಡಳಿಗೆ ತಿಳಿಸಬೇಕಿತ್ತು. ಅದರಂತೆಯೇ ಉಳಿಸಿಕೊಳ್ಳುವ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ. ಈ ಪಟ್ಟಿಯಲ್ಲಿ ಶಾಕಿಂಗ್ ಹೆಸರುಗಳು ಕೇಳಿಬಂದಿದ್ದು, ಆ ಪೈಕಿ ಇಬ್ಬರ ಹೆಸರು ಮಾತ್ರ ಕ್ರೀಡಾಭಿಮಾನಿಗಳನ್ನು ಭಾರೀ ಅಚ್ಚರಿಗೆ ದೂಡಿದೆ.
ಇದನ್ನೂ ಓದಿ: ‘ಪುಷ್ಪ 2’ ವಿಶೇಷ ಹಾಡಿನಿಂದ ಶ್ರದ್ಧಾ ಕಪೂರ್ ಹೊರಗೆ! ಕನ್ನಡದ ಸ್ಟಾರ್ ನಟಿ ಪಾಲಾಯ್ತು ಈ ಬಿಗ್ ಪ್ರಾಜೆಕ್ಟ್?
17ನೇ ಆವೃತ್ತಿಯಲ್ಲಿ ತಮ್ಮ ತಂಡವನ್ನು ನಾಯಕನಾಗಿ ಚಾಂಪಿಯನ್ಸ್ ಪಟ್ಟಕ್ಕೇರಿಸಿದ ಶ್ರೇಯಸ್ ಅಯ್ಯರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟರ್ ರಿಷಭ್ ಪಂತ್. ಇವರಿಬ್ಬರನ್ನು ಆಯಾ ಫ್ರಾಂಚೈಸಿಗಳು ಉಳಿಸಿಕೊಳ್ಳಲು ಬಯಸದೆ ಇರುವುದು ನಿಜಕ್ಕೂ ಕ್ರಿಕೆಟ್ ಪ್ರಿಯರಲ್ಲಿ ಆಶ್ಚರ್ಯ ಮೂಡಿಸಿದೆ. ಜತೆಗೆ ಹಲವು ಗೊಂದಲಗಳಿಗೂ ಕಾರಣವಾಗಿದೆ. ಡಿಸಿ ತಂಡದ ಸ್ಟಾರ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದ ಪಂತ್ರನ್ನು ಕೈಬಿಡಲು ಕಾರಣವೇನು? ಎಂದು ಯೋಚಿಸುತ್ತಿದ್ದ ಫ್ಯಾನ್ಸ್ಗಳಿಗೆ ಸಿಕ್ಕ ಉತ್ತರವೇ ಶ್ರೇಯಸ್ ಅಯ್ಯರ್. ಒಂದೆಡೆ ಕೆಕೆಆರ್ ಮ್ಯಾಚ್ ವಿನ್ನಿಂಗ್ ಕ್ಯಾಪ್ಟನ್ರನ್ನು ರಿಟೆನ್ಶನ್ ಪ್ರಕ್ರಿಯೆಯಲ್ಲಿ ಕೈಬಿಟ್ಟಿದ್ದು, ಡೆಲ್ಲಿ ಮ್ಯಾನೇಜ್ಮೆಂಟ್ಗೆ ಹಾಲು-ಅನ್ನ ಕೊಟ್ಟಂತಾಯಿತು.
ರಿಷಭ್ ಪಂತ್ರನ್ನು ಹರಾಜಿಗೆ ನೂಕಿರುವ ಡೆಲ್ಲಿ ಕ್ಯಾಪಿಟಲ್ಸ್, ಈ ಹಿಂದೆ ತಮ್ಮ ಫ್ರಾಂಚೈಸಿಯಲ್ಲಿ ಆಡಿದ್ದ ಶ್ರೇಯಸ್ ಅಯ್ಯರ್ಗೆ ಮಣೆ ಹಾಕಲು ಇದೀಗ ನಿರ್ಧರಿಸಿದೆ. ಈ ಬಗ್ಗೆ ಮ್ಯಾನೇಜ್ಮೆಂಟ್ನಲ್ಲಿಯೂ ಚರ್ಚೆಯಾಗಿದೆ. ಶ್ರೇಯಸ್ಗೆ ಡೆಲ್ಲಿ ಟೀಮ್ನ ನಾಯಕತ್ವ ಕೊಡಲು ನಿರ್ಧರಿಸಿರುವ ಫ್ರಾಂಚೈಸಿ, ಮುಂದೆ ನಡೆಯಲಿರುವ ಹರಾಜಿನಲ್ಲಿ ಅವರನ್ನು ಖರೀದಿಸಲು ದೊಡ್ಡ ಬಿಡ್ಡಿಂಗ್ಗೆ ಸಜ್ಜಾಗಿದೆ ಎಂದು ವರದಿಯಾಗಿದೆ. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸುವುದಾದರೆ, ಪ್ರಾಯಶಃ ಅಯ್ಯರ್ರನ್ನು ತಂಡದಲ್ಲಿ ಆಡಿಸುವ ಉದ್ದೇಶದಿಂದಲೇ ರಿಷಭ್ ಪಂತ್ ಕೈಬಿಟ್ಟಿದ್ದಾರೆ ಎಂದು ಹೇಳಬಹುದು,(ಏಜೆನ್ಸೀಸ್).