ಕ್ರೀಡೆ

ಸಹ ಆಟಗಾರ್ತಿ ವಿರುದ್ಧ ಕೇಸ್​ ದಾಖಲಿಸಿದ ದೀಪ್ತಿ ಶರ್ಮ: ಕಾರಣ ಕೇಳಿದ್ರೆ ಅಚ್ಚರಿ ಆಗ್ತೀರಾ! | Deepti Sharma

Deepti Sharma: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ದೀಪ್ತಿ ಶರ್ಮ ಅವರು ತಮ್ಮ ಸಹ ಆಟಗಾರ್ತಿ ಹಾಗೂ ಯುಪಿ ವಾರಿಯರ್ಸ್​ ತಂಡದ ಬ್ಯಾಟರ್​ ಆರುಷಿ ಗೋಯಲ್​ ವಿರುದ್ಧ ವಂಚನೆ ಆರೋಪ ಹೊರೆಸುವ ಮೂಲಕ FIR ದಾಖಲಿಸಿದ್ದಾರೆ.

ಹೌದು, ಆರುಷಿ ಕಳೆದ ಎರಡು ವರ್ಷಗಳಿಂದ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ದೀಪ್ತಿ ಬಳಿ 25 ಲಕ್ಷ ರೂ. ಪಡೆದು ವಂಚಿಸಿದ್ದಲ್ಲದೆ, ಆಗ್ರಾದಲ್ಲಿರುವ ದೀಪ್ತಿ ಪ್ಲ್ಯಾಟ್​ಗೆ ನುಗ್ಗಿ ಚಿನ್ನ, ಬೆಳ್ಳಿಯ ಒಡವೆ ಹಾಗೂ 2.16 ಲಕ್ಷ ರೂ ಮೌಲ್ಯದ ವಿದೇಶಿ ಕರೆನ್ಸಿ ಕದ್ದೊಯ್ಯಿದಿದ್ದಾರೆ ಎಂದು ಆರೋಪಿಸಿ ದೀಪ್ತಿ ಶರ್ಮ ಸಹೋದರ ಸುಮಿತ್​ ಶರ್ಮ ದೂರು ನೀಡಿದ್ದಾರೆ ಎಂದು ಶನಿವಾರ ವರದಿಯಾಗಿದೆ.

ಬಿಎನ್ಎಸ್ ಸೆಕ್ಷನ್ 305 (ಎ) (ಕಳ್ಳತನ), 331 (3) (ಮನೆ ದರೋಡೆ), 316 (2) (ಕ್ರಿಮಿನಲ್ ನಂಬಿಕೆ ದ್ರೋಹ) ಮತ್ತು 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಯಾರನ್ನಾದರೂ ಅವಮಾನಿಸುವುದು) ಅಡಿಯಲ್ಲಿ ಆರುಷಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.(ಏಜೆನ್ಸೀಸ್​)