ಐಪಿಎಲ್ನಲ್ಲಿ ಬೌಂಡರಿ-ಸಿಕ್ಸರ್ಗಳನ್ನು ಸಿಡಿಸುತ್ತ ಸ್ಫೋಟಕ ಬ್ಯಾಟಿಂಗ್ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳನ್ನು ರಂಜಿಸುತ್ತಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್, ಲಾಕ್ಡೌನ್ ನಡುವೆ ಹೊಸ ರೀತಿಯಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸನ್ರೈಸರ್ಸ್ ನಾಯಕರೂ ಆಗಿರುವ ವಾರ್ನರ್ ಟಿಕ್ಟಾಕ್ನಲ್ಲಿ ಬೌಂಡರಿ ಸಿಕ್ಸರ್ ಬಾರಿಸುತ್ತಿದ್ದಾರೆ.
ಇದನ್ನೂ ಓದಿ: VIDEO| ಮಗಳೊಂದಿಗೆ ಸೇರಿ ಕತ್ರಿನಾ ಕೈಫ್ ಅಭಿನಯದ ಶೀಲಾ ಕಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ ವಾರ್ನರ್!
ಅಂದರೆ, ಟಿಕ್ಟಾಕ್ನಲ್ಲಿ ಟಾಲಿವುಡ್ ಸಿನಿಮಾದ ಹಲವು ಸ್ಟಾರ್ಗಳ ಹಾಡಿಗೆ ಸ್ಟೆಪ್ ಹಾಕುತ್ತಿದ್ದಾರೆ. ಇದೀಗ ಜೂನಿಯರ್ ಎನ್ಟಿಆರ್ ಜನ್ಮದಿನದ ನಿಮಿತ್ತ, ಜನತಾ ಗ್ಯಾರೇಜ್ ಚಿತ್ರದ ‘ಪಕ್ಕಾ ಲೋಕಲ್..‘ ಹಾಡಿಗೆ ಪತ್ನಿ ಜತೆ ಸೇರಿ ಸ್ಟೆಪ್ ಹಾಕಿ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: ವಾರ್ನರ್ ಟಿಕ್ಟಾಕ್ಗೆ ಅಭಿಮಾನಿಗಳು ಫಿದಾ!
ಡೇವಿಡ್ ವಾರ್ನರ್ ಈ ರೀತಿಯ ಹಾಡುಗಳನ್ನು ಟಿಕ್ಟಾಕ್ ಮಾಡಿದ್ದು ಇದೇ ಮೊದಲೇನಲ್ಲ. ಪತ್ನಿ ಕ್ಯಾಂಡಿಸ್ ಜತೆಗೂಡಿ ಟಾಲಿವುಡ್ ನಟ ಅಲ್ಲು ಅರ್ಜುನ್ರ ಇತ್ತೀಚೆಗಿನ ಯಶಸ್ವಿ ತೆಲುಗು ಸಿನಿಮಾ ‘ಅಲಾ ವೈಕುಂಠಪುರಮುಲು’ನ ಜನಪ್ರಿಯ ‘ಬುಟ್ಟ ಬೊಮ್ಮ’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದರು. ಕೆಲದಿನಗಳ ಹಿಂದೆ ವಾರ್ನರ್ ಪುತ್ರಿಯರಾದ ಇಂಡಿ ಮತ್ತು ಇವಿ ಜತೆಗೂಡಿ ಕತ್ರಿನಾ ಕೈಫ್ ಅವರ ‘ಶೀಲಾ ಕೀ ಜವಾನಿ’ ಹಾಡಿಗೂ ಹೆಜ್ಜೆ ಹಾಕಿದ ವಿಡಿಯೋ ಹಂಚಿಕೊಂಡಿದ್ದರು. ಇದೀಗ ಸದ್ಯ ಎನ್ಟಿಆರ್ಗೆ ಶುಭಕೋರಿದ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ವಾರ್ನರ್ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)