ಕ್ರೀಡೆ

ಅಭಿಮಾನಿಗಳಿಗೆ ಗುಡ್​ ನ್ಯೂಸ್ ನೀಡಿದ ಮುಂಬೈ ಇಂಡಿಯನ್ಸ್​; ಏನದು?

ಮುಂಬೈ: ಮುಂದಿನ ಕೆಲವೇ ದಿನಗಳಲ್ಲಿ 17ನೇ ಆವೃತ್ತಿಯ ಐಪಿಎಲ್​ಗಾಗಿ ಈಗಾಗಲೇ ಸಿದ್ದತೆಗಳು ಭರದಿಂದ ಆರಂಭಗೊಂಡಿದ್ದು, ಈ ಪೈಕಿ ಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು ಮುಂಬೈ ಇಂಡಿಯನ್ಸ್​ ಹಾಗೂ ಹಾರ್ದಿಕ್​ ಪಾಂಡ್ಯ ಎಂದು ಹೇಳಬಹುದಾಗಿದೆ. ಇನ್ನು ಐಪಿಎಲ್​ ಪ್ರಿಯರಿಗೆ ಶುಭ ಸುದ್ದಿ ನೀಡಿರುವ ಮುಂಬೈ ಇಂಡಿಯನ್ಸ್ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಮುಂಬೈ ಇಂಡಿಯನ್ಸ್​ ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದ ವಿಶೇಷ ಅಪ್‌ಡೇಟ್‌ ಒಂದನ್ನು ನೀಡಿದೆ.

ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯ ಮಾರ್ಚ್ 24 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಮತ್ತು ಮುಂದಿನ ಮೂರು ಪಂದ್ಯಗಳ ಟಿಕೆಟ್‌ಗಳನ್ನು ನಾಲ್ಕು ಹಂತಗಳಲ್ಲಿ ಮಾರಾಟ ಮಾಡಲಾಗುತ್ತದೆ. ಫ್ರಾಂಚೈಸ್ ಈ ನಾಲ್ಕು ಹಂತಗಳ ಟಿಕೆಟ್ ಮಾರಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.

ಮೊದಲ ಹಂತದ ಟಿಕೆಟ್ ಮಾರಾಟ ಮಾರ್ಚ್ 6 ರಿಂದ ಪ್ರಾರಂಭವಾಗಲಿದ್ದು, ಈ ಹಂತದ ಟಿಕೆಟ್‌ಗಳನ್ನು SLICE UPI ಮೂಲಕ ಮಾತ್ರ ಖರೀದಿಸಬೇಕಾಗಿರುತ್ತದೆ. 2ನೇ ಹಂತದ ಟಿಕೆಟ್‌ಗಳ ಮಾರಾಟ ಮಾರ್ಚ್ 9 ರಿಂದ ಪ್ರಾರಂಭವಾಗಲಿದ್ದು, ಮೂರನೇ ಹಂತದಲ್ಲಿ, ಮಾರ್ಚ್ 10 ರಿಂದ ಟಿಕೆಟ್ ಬುಕಿಂಗ್ ಪ್ರಾರಂಭವಾಗುತ್ತದೆ. ಇದರ ನಂತರ, ನಾಲ್ಕನೇ ಹಂತವು ಮಾರ್ಚ್ 13 ರಿಂದ ಪ್ರಾರಂಭವಾಗಲಿದ್ದು, ಈ ಸಮಯದಲ್ಲಿ ಎಲ್ಲರಿಗೂ ಟಿಕೆಟ್ ಬುಕಿಂಗ್ ಮಾಡುವ ಅವಕಾಶ ಸಿಗಲಿದೆ.

ಮುಂಬೈ ತನ್ನ ಮೊದಲ ಎರಡು ಪಂದ್ಯಗಳನ್ನು ಅಹಮದಾಬಾದ್ ಮತ್ತು ಹೈದರಾಬಾದ್‌ನಲ್ಲಿ ಆಡಲಿದೆ. ಉಳಿದೆರಡು ಪಂದ್ಯಗಳನ್ನು ಮುಂಬೈ ತನ್ನ ತವರು ಮೈದಾನವಾದ ವಾಂಖೆಡೆಯಲ್ಲಿ ಆಡಲಿದೆ. ಮುಂಬೈ ಇಂಡಿಯನ್ಸ್ ಈ ಪೋಸ್ಟ್‌ನಲ್ಲಿ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ಈ ಲಿಂಕ್ ಮೂಲಕ, ಅಭಿಮಾನಿಗಳು ನೀಲಿ, ಚಿನ್ನ, ಬೆಳ್ಳಿ ಅಥವಾ ಇತರ ಹಲವು ರೀತಿಯ ಸದಸ್ಯತ್ವವನ್ನು ಪಡೆಯಬಹುದಾಗಿದೆ.